Bengaluru: 7 ನೇ ರಾಜ್ಯ ವೇತನ ಆಯೋಗದ (7th State Pay Commission) ಶಿಫಾರಸ್ಸಿನಂತೆ ಸರ್ಕಾರಿ ನೌಕರರ (government employees) ವೇತನ, ವೇತನ ಸಂಬಂಧಿತ ಭತ್ಯೆ, ಪಿಂಚಣಿಯನ್ನು (pension) 2022ರ ಜು.1ರಿಂದ ಅನ್ವಯವಾಗುವಂತೆ 2024ರ ಆಗಸ್ಟ್ 1ರಿಂದ ಅನುಷ್ಠಾನಗೊಳಿಸಲಾಗುವುದು.
ಸೋಮವಾರ ನಡೆದ ಸಚಿವ ಸಂಪುಟ (Legislative Assembly) ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ವಿಧಾನಸಭೆಗೆ ಮಾಹಿತಿ ನೀಡಿದರು.
”7ನೇ ವೇತನ ಆಯೋಗವು (7th Pay Commission) ಕಳೆದ ಮಾರ್ಚ್ 24ರಂದು ವರದಿ ಸಲ್ಲಿಸಿತ್ತು. ಅದರಂತೆ 2022ರ ಜುಲೈ 1 ಕ್ಕೆ ನೌಕರರ ಮೂಲ ವೇತನಕ್ಕೆ ಶೇಕಡಾ 31 ರಷ್ಟು ತುಟ್ಟಿಭತ್ಯೆ ಮತ್ತು ಶೇಕಡಾ 27.50 ರಷ್ಟು ಫಿಟ್ಮೆಂಟ್ ಸೇರಿಸಿ ವೇತನ, ಪಿಂಚಣಿ ಪರಿಷ್ಕರಿಸಲಾಗುವುದು.
ಇದರಿಂದ ನೌಕರರ ಮೂಲ ವೇತನ ಮತ್ತು ಪಿಂಚಣಿಯಲ್ಲಿ ಶೇಕಡಾ 58.50ರಷ್ಟು ಹೆಚ್ಚಳವಾಗುತ್ತದೆ. ಮನೆ ಬಾಡಿಗೆ ಭತ್ಯೆಯಲ್ಲಿ (house rent allowance) ಶೇಕಡಾ 32 ರಷ್ಟು ಹೆಚ್ಚಳವಾಗುತ್ತದೆ,” ಎಂದು ವಿವರಿಸಿದರು.
ಮೂಲ ವೇತನದಲ್ಲಿಯೂ ಭಾರೀ ಏರಿಕೆ
” ನೌಕರರ ಕನಿಷ್ಠ ಮೂಲ (Huge hike in basic pay) ವೇತನವು 17,000 ರೂ.ನಿಂದ 27,000 ರೂ.ಗೆ ಹಾಗೂ ಗರಿಷ್ಠ ವೇತನವು 1,50,600 ರೂ.ನಿಂದ 2,41,200 ರೂ.ಗೆ ಪರಿಷ್ಕರಣೆಯಾಗುತ್ತದೆ. ನೌಕರರ ಕನಿಷ್ಠ ಪಿಂಚಣಿಯು 8,500 ರೂ.ನಿಂದ 13,500 ರೂ.ಗೆ ಹಾಗೂ ಗರಿಷ್ಠ ಪಿಂಚಣಿಯು 75,300 ರೂ.ನಿಂದ 1,20,600 ರೂ.ಗೆ ಪರಿಷ್ಕರಣೆಯಾಗುತ್ತದೆ.
ಈ ಪರಿಷ್ಕರಣೆಯು ಅನುದಾನಿತ ಶಿಕ್ಷಣ ಸಂಸ್ಥೆ (aided educational institutions) ಮತ್ತು ಸ್ಥಳೀಯ ಸಂಸ್ಥೆಗಳ ನೌಕರರು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗೂ ಅನ್ವಯಾಗುತ್ತದೆ ” ಎಂದು ಸದನಕ್ಕೆ ತಿಳಿಸಿದರು.
8ನೇ ಕೇಂದ್ರ ವೇತನ ಆಯೋಗವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು (ಸಿಬ್ಬಂದಿ ತಂಡ, ಕೇಂದ್ರ ಸರ್ಕಾರಿ ನೌಕರರಿಗೆ ಜಂಟಿ ಸಲಹಾ ಯಂತ್ರೋಪಕರಣಗಳು) ಮೋದಿ ಸರ್ಕಾರಕ್ಕೆ ಕಳುಹಿಸಿದ್ದಾರೆ.
ಸಂಪುಟ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಮಿಶ್ರಾ ಅವರು 8 ನೇ ವೇತನ ಆಯೋಗವನ್ನು ಸ್ಥಾಪಿಸಲು ಮತ್ತು ವೇತನ ಮತ್ತು ಭತ್ಯೆಗಳ ಪರಿಷ್ಕರಣೆಗಳ ಬಗ್ಗೆ ಉದ್ದೇಶಪೂರ್ವಕವಾಗಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.