New York: ಅದಾನಿ ಗ್ರೂಪಿನ ಮುಖ್ಯಸ್ಥ ಗೌತಮ್ ಅದಾನಿ, (Adani Group chief Gautam Adani) ಸಾಗರ್ ಅದಾನಿ ಮತ್ತು ಅಜುರೆ ಪವರ್‌ನ ಮಾಜಿ ಎಕ್ಸಿಕ್ಯೂಟಿವ್ ಸೈರಿಲ್ ಕೆಬನೆಸ್ ಸೇರಿ 8 ಮಂದಿಗೆ ಅಮೆರಿಕದಲ್ಲಿ ವಂಚನೆಯ ಆರೋಪಗಳಿದ್ದು, ನ್ಯೂಯಾರ್ಕ್ ಈಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್‍ನಿಂದ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ.
2020 ರಿಂದ 2024ರ ಅವಧಿಯಲ್ಲಿ ಭಾರತದಲ್ಲಿ ಸೌರಶಕ್ತಿ ಗುತ್ತಿಗೆಗಳನ್ನು (solar energy contract) ಪಡೆಯಲು 250 ಮಿಲಿಯನ್ ಡಾಲರ್‌ಗಳಷ್ಟು ಲಂಚ ನೀಡಲಾಗಿದೆ ಎನ್ನಲಾಗುತ್ತಿದೆ.
ಅಮೆರಿಕದಲ್ಲಿ ದಾಖಲಾದ ಈ ಪ್ರಕರಣವು, ಗುತ್ತಿಗೆಗಳನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣವನ್ನೇ ಮಾತ್ರವಲ್ಲ, ಹೂಡಿಕೆದಾರರನ್ನು ವಂಚಿಸಲು ಕ್ರಮವನ್ನೂ ಒಳಗೊಂಡಿದೆ.
ಇದು ಅಮೆರಿಕದ ಹೂಡಿಕೆದಾರರಿಂದ 3 ಬಿಲಿಯನ್ ಡಾಲರ್ಗಿಂತ ಹೆಚ್ಚು ಸಾಲ ಪಡೆದದ್ದರಿಂದ, ಹೂಡಿಕೆದಾರರ ಹಿತದೃಷ್ಟಿಯಿಂದ ದಾಖಲಾಗಿರುವುದಾಗಿ ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.
ಈ ಪ್ರಕ್ರಿಯೆಯ ಮಧ್ಯೆ, ಅದರೊಂದಿಗೆ ದೇಶಾದ್ಯಾಂತ ಹೂಡಿಕೆದಾರರಿಂದ ಬಾಂಡ್ ಯೋಜನೆ ಕೈಬಿಡಲಾಗಿದೆ ಮತ್ತು ಅದಾನಿ ಗ್ರೂಪ್‌ನ ಸ್ಟಾಕ್ಸ್ ಮರುಕಳಿಸಿದ ಹಿನ್ನಡೆ ಎದುರಾಗಿದೆ.
ಇದೇ ವೇಳೆ, ಅದಾನಿ ಗ್ರೂಪ್‌ನ ಬಹುತೇಕ ಎಲ್ಲಾ ಸ್ಟಾಕ್ಗಳೂ ಇಂದು ಗುರುವಾರ ನೆಲಕಚ್ಚಿವೆ. ಹಿಂಡನ್ಬರ್ಗ್ ವೇಳೆಯಲ್ಲಿ ಅದಾನಿ ಗ್ರೂಪ್ಗೆ ಆಗಿದ್ದ ಹಿನ್ನಡೆ ಈಗ ಮರುಕಳಿಸುತ್ತಿರುವಂತಿದೆ.