Home Karnataka Dharwad ರೈಲು ಸಂಚಾರ ಸಮಯದಲ್ಲಿ ಬದಲಾವಣೆ

ರೈಲು ಸಂಚಾರ ಸಮಯದಲ್ಲಿ ಬದಲಾವಣೆ

234
Hubli Dharwad Hampi Express Varanasi Mysore Express Yesvantpur Vijayapura Express Special Train Timings Change

Hubli, Dharwad : ಹಂಪಿ ಎಕ್ಸ್‌ಪ್ರೆಸ್‌ (Hampi Express Train) ರೈಲು ಸಂಚಾರ ಸಮಯದಲ್ಲಿ ಬದಲಾವಣೆ (Timings) ಮಾಡಲಾಗಿದ್ದು, ಜ.17 ರಿಂದ ಹುಬ್ಬಳ್ಳಿಯಿಂದ, 18ರಿಂದ ಮೈಸೂರಿನಿಂದ ಬದಲಾವಣೆಯಾಗಲಿದೆ.

ಹುಬ್ಬಳ್ಳಿಯಿಂದ ಸಂಜೆ 6.20 ಕ್ಕೆ ಹೊರಡುತ್ತಿದ್ದ ಹಂಪಿ ಎಕ್ಸ್‌ಪ್ರೆಸ್‌ ರೈಲು ಈಗ 6.30 ಕ್ಕೆ ಹೋಗಲಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಮೈಸೂರಿನಿಂದ ಹೊರಟು ಬೆಳಿಗ್ಗೆ 10.35 ಕ್ಕೆ ಹುಬ್ಬಳ್ಳಿಗೆ ಬರುತ್ತಿದ್ದು, ಇನ್ನು ಮುಂದೆ ಬೆಳಗ್ಗೆ 10.20 ಕ್ಕೆ ಬರಲಿದೆ.

ವಾರಣಾಸಿ–ಮೈಸೂರು ಎಕ್ಸ್‌ಪ್ರೆಸ್‌ (Varanasi Mysore Express Train) ರೈಲು ಆಲಮಟ್ಟಿಯಿಂದ ಬೆಳಿಗ್ಗೆ 6.30 ರ ಬದಲಾಗಿ 6.11 ಕ್ಕೆ ಹೊರಡಲಿದೆ.

ಮೇ 8 ರಿಂದ ಜಾರಿಗೆ ಬರುವಂತೆ ಯಶವಂತಪುರ–ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ (Yesvantpur Vijayapura Express Special Train) ರೈಲಿನ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು ಈಗಿನ ವೇಳಾಪಟ್ಟಿ ಪ್ರಕಾರ ಈ ರೈಲು ಯಶವಂತಪುರದಿಂದ ರಾತ್ರಿ 11.30 ಕ್ಕೆ ಹೊರಡುತ್ತಿದ್ದು, ಬದಲಾವಣೆ ನಂತರ 11.45 ಕ್ಕೆ ಹೊರಡಲಿದೆ. ಮೇ 9ರಿಂದ ವಿಜಯಪುರದಿಂದ ರಾತ್ರಿ 11.50 ರ ಬದಲಾಗಿ 11.58 ಕ್ಕೆ ಸಂಚಾರ ಆರಂಭಿಸಲಿದೆ.

ಮೇ 15 ರಿಂದ ಯಶವಂತಪುರ–ಹುಬ್ಬಳ್ಳಿ ಎಕ್ಸ್‌ಪ್ರೆಸ್‌ (Yesvantpur – Hubballi Express Train) ರೈಲಿನ ಸಮಯ ಬದಲಾವಣೆಯಾಗಲಿದ್ದು, ಯಶವಂತಪುರದಿಂದ ರಾತ್ರಿ 11.50ರ ಬದಲಾಗಿ 11.58 ಕ್ಕೆ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಿಸಿದೆ.

NO COMMENTS

LEAVE A REPLY

Please enter your comment!
Please enter your name here

You cannot copy content of this page