Channapatna, Kanakapura, Ramanagara District : ಚನ್ನಪಟ್ಟಣ ತಾಲ್ಲೂಕಿನ ಚೆನ್ನಂಕೇಗೌಡನದೊಡ್ಡಿ ಗ್ರಾಮದಲ್ಲಿ ರಮೇಶ್ ಚಾರಿಟಬಲ್ ಟ್ರಸ್ಟ್ ಆರಂಭಿಸಿರುವ ‘ಬೊಂಬೆನಾಡು ಸುರಭಿ ಗೋಶಾಲೆ’ಯನ್ನು (Surabhi Goshala) ಡಿವೈಎಸ್‌ಪಿ ಕೆ.ಎನ್.ರಮೇಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ DySP ಕೆ.ಎನ್.ರಮೇಶ್ ” ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಗೋವಿನ ಸಂತತಿ ನಮ್ಮ ದೇಶದಲ್ಲಿದ್ದು ಗೋವಿನ ಹಾಲು ಸೇರಿದಂತೆ ಹಾಲಿನ ಉತ್ಪನ್ನ ದೇಹಕ್ಕೆ ಪೂರಕ. ಗೋವು ಸಂರಕ್ಷಣೆ ಮಾಡಿದರೆ ರಾಷ್ಟ್ರದ ಸಂರಕ್ಷಣೆ ಮಾಡಿದಂತೆ, ಆದ್ದರಿಂದ ಗೋವುಗಳಿಗೆ ವಿಶೇಷ ಆದ್ಯತೆ ನೀಡಬೇಕು” ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಮಧುಸೂದನ್, ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಸಂತ್ ಕುಮಾರ್, ಸಾಹಿತಿ ಯೋಗಾನಂದ್, Block Congress ಅಧ್ಯಕ್ಷ ಸುನೀಲ್ ಕುಮಾರ್, ಮುಖಂಡರಾದ ಶ್ರೀನಿವಾಸ್, ಪತ್ರಕರ್ತ ಸು.ತ. ರಾಮೇಗೌಡ, ಎಲೇಕೇರಿ ರವೀಶ್, ಸಾಹಿತಿ ಕೂರಣಗೆರೆ ಕೃಷ್ಣಪ್ಪ, ಕನ್ನಡ ಪರಿಚಾರಕ ಓಂಕಾರಪ್ರಿಯ, ಗಾಯಕಿ ಮಾಲತಿ ಸುರೇಶ್ ಉಪಸ್ತಿಷ್ಠರಿದ್ದರು.