back to top
20.9 C
Bengaluru
Friday, November 22, 2024
HomeKarnatakaBengaluru Urbanಬೆಂಗಳೂರು ನಗರದಲ್ಲಿ ವಾಹನ ಟೋಯಿಂಗ್‌ ಸ್ಥಗಿತ

ಬೆಂಗಳೂರು ನಗರದಲ್ಲಿ ವಾಹನ ಟೋಯಿಂಗ್‌ ಸ್ಥಗಿತ

- Advertisement -
- Advertisement -

Bengaluru (Bangalore City) : ಬೆಂಗಳೂರು ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಮತ್ತು ಟೋಯಿಂಗ್‌ (Vehicle Towing) ಕುರಿತಂತೆ Police ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಸರಳೀಕೃತ ವ್ಯವಸ್ಥೆ ಜಾರಿಗೊಳ್ಳುವವರೆಗೂ ಟೋಯಿಂಗ್‌ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು “ಇನ್ನು 15 ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಟೋಯಿಂಗ್‌ ಕುರಿತಂತೆ ಸರಳೀಕೃತ ವ್ಯವಸ್ಥೆ ಜಾರಿ ಬರಲಿದ್ದು, ಅಲ್ಲಿಯವರೆಗೆ ಟೋಯಿಂಗ್‌ ಸ್ಥಗಿತಗೊಳಿಸಲಾಗುವುದು. ಈಗ ಟೋಯಿಂಗ್‌ನಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸೂಕ್ತಪರಿಹಾರ ಕಂಡಕೊಳ್ಳಲು ನಿರ್ಧಾರ ಮಾಡಿದ್ದು ಈ ಸಂಬಂಧ ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ.

ನಿಯಮಾವಳಿಗಳನ್ನು ಆದಷ್ಟು ಸರಳೀಕರಣ ಮಾಡುವುದರ ಜತೆಗೆ ಹೆಚ್ಚು ಪಾರದರ್ಶಕವಾಗಿ ಇರುವಂತೆ ನೋಡಿಕೊಂಡು No Parking ಫಲಕ ವಾಹನ ಸವಾರರಿಗೆ ಕಾಣುವಂತೆ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಹೊಸ ವ್ಯವಸ್ಥೆ ಘೋಷಣೆ ಮಾಡುವವರೆಗೆ ನಗರ ಪೊಲೀಸ್‌ ಸಿಬ್ಬಂದಿ ನೋಪಾರ್ಕಿಂಗ್‌ ಉಲ್ಲಂಘನೆ ಪ್ರಕರಣಗಳನ್ನು ನಿಭಾಯಿಸುತ್ತಾರೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ದಂಡದ ಮೊತ್ತದ ಪರಿಷ್ಕರಣೆಯೂ ಸೇರಿ ಹಲವು ವಿಷಯಗಳ ಬಗ್ಗೆ ಸ್ಪಷ ನಿರ್ಧಾರಕ್ಕೆ ಬರಲಾಗುವುದು” ಎಂದು ಹೇಳಿದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page