Tiptur, Tumkur (Tumakuru) : ತಿಪಟೂರು ತಾಲ್ಲೂಕಿನ ಆದಿಚುಂಚನಗಿರಿ ಶಾಖಾಮಠದ (Adichunchanagiri Mutt) ದಸರೀಘಟ್ಟದ ಚೌಡೇಶ್ವರಿ ದೇವಾಲಯದಲ್ಲಿ (Sri Dasarighatta Chowdeshwari Temple) ಫೆ.6 ಭಾನುವಾರದಂದು ಚೌಡೇಶ್ವರಿ ದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಪೂಜಾ ಮಹೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಯ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಮಾಜಿ ಶಾಸಕ ಕೆ. ಷಡಕ್ಷರಿ, ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಲ್. ಜಗದೀಶ್, ಬೆಂಗಳೂರಿನ ರಾಮಕೃಷ್ಣಪ್ಪ, ಚಲನಚಿತ್ರ ನಿರ್ಮಾಪಕ ಚನ್ನೇಗೌಡ ಭಾಗವಹಿಸಲಿದ್ದಾರೆ ಎಂದು ಮಠದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.