Bagepalli : ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಬುಧವಾರ ತಾಲ್ಲೂಕು ಯಾದವ ಸಂಘ ಹಾಗೂ ಹಿಂದೂ ಧರ್ಮ ಪ್ರಭೋದಾಶ್ರಮ ಕೃಷ್ಣ ಮಂದಿರದ ಆಶ್ರಯದಲ್ಲಿ ಭಗವದ್ಗೀತೆ ಪ್ರಚಾರ (Bhagavad Gita Program)ಕಾರ್ಯಕ್ರಮ ಹಮ್ಮಿಕೊಳ್ಳಾಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ “ಇಂದಿನ ಪೀಳಿಗೆಗೆ ಸಿನಿಮಾ, ನಟರ ಬಗ್ಗೆ ಇರುವ ಕಾಳಜಿ, ರಾಮಾಯಣ, ಭಗವದ್ಗೀತೆ ಪುಸ್ತಕಗಳ ಮೇಲೆ ಇಲ್ಲ. ನಟ, ನಟಿಯರ ಅನುಕರಣೆ, ಹಾವ-ಭಾವಗಳಿಗೆ ಸೀಮಿತರಾಗಿದ್ದು ಕೆಲವರು ತಮ್ಮ ಹುಚ್ಚುತನಗಳನ್ನು ಪ್ರದರ್ಶನ ಮಾಡುತ್ತಾರೆ. ಆದರೆ ರಾಮಾಯಣ, ಭಗವದ್ಗೀತೆಯ ಸಾರಾಂಶ ಹಾಗೂ ಪಾತ್ರಗಳು, ನಮ್ಮ ಜೀವನದ ಕ್ರಮಕ್ಕೆ ಅಳವಡಿಸಿಕೊಳ್ಳಬೇಕು. ಭಗವದ್ಗೀತೆಯ ಬಗ್ಗೆ ಮನೆ ಮನೆಗೆ ಪ್ರಚಾರ ಮಾಡಿ ಜಾಗೃತಿ ಮೂಡಿಸುತ್ತಿರುವ ಪ್ರಚಾರಕರ ಸೇವೆ ಶ್ಲಾಘನೀಯವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಪ್ರಭೋದಾಶ್ರಮ ಶ್ರೀ ಕೃಷ್ಣ ಮಂದಿರದ ಶ್ರೀನಿವಾಸ್, ತಾಲ್ಲೂಕು ಯಾವ ಸಂಘದ ಅಧ್ಯಕ್ಷ ರಾಮಕೃಷ್ಣಹೆಗಡೆ ಸೇರಿದಂತೆ ಸಮುದಾಯದವರು ಭಾಗವಹಿಸಿದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ಭಗವದ್ಗೀತೆ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ appeared first on Chikkaballapur.