Home Karnataka Mysuru ಮೈಸೂರು ಅರಮನೆ ಅಂಗಳದಲ್ಲಿ ಪುಷ್ಪ ಪ್ರದರ್ಶನ

ಮೈಸೂರು ಅರಮನೆ ಅಂಗಳದಲ್ಲಿ ಪುಷ್ಪ ಪ್ರದರ್ಶನ

191
Mysore Winter Flower Show Doll Exhibition

Mysuru : December 25 ರಿಂದ January 2 ರವರೆಗೂ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ (Mysore Palace) ಅಂಗಳದಲ್ಲಿ ಅರಮನೆ ಮಂಡಳಿ ವಾರ್ಷಿಕ ಪುಷ್ಪ ಪ್ರದರ್ಶನವನ್ನು (Annual Flower Exhibition) ಆಯೋಜಿಸಿದ್ದೆ. ಅಯೋಧ್ಯೆಯ ರಾಮಮಂದಿರ, ಸೇನಾಪಡೆಗಳ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್‌ ರಾವತ್‌, ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್ ಅಭಿನಂದನ್‌ ವರ್ತಮಾನ್‌ ರವರ ಕಲಾಕೃತಿಗಳು ಈ ವರ್ಷದ ಕೇಂದ್ರ ಬಿಂದುವಾಗಲಿದೆ.

2019ರಲ್ಲಿ ಕೊನೆಯ ಬಾರಿ ಆಯೋಜಿಸಲಾಗಿದ್ದ ಪುಷ್ಪ ಪ್ರದರ್ಶನ (Flower Show) Covid-19 ಕಾರಣದಿಂದ 2020ರಲ್ಲಿ ಸ್ಥಗಿತಗೊಂಡಿತ್ತು. ಈ ಬಾರಿ ನೇಗಿಲು ಹೊತ್ತ ರೈತ, ಜಯಚಾಮರಾಜ ಒಡೆಯರ್‌ (Chamarajendra Wadiyar), ಚಾಮುಂಡೇಶ್ವರಿ (Chamundeshwari), ಮಹಿಷಾಸುರ (Mahishasura), ಆನೆಗಳ ಖೆಡ್ಡಾ (elephant khedda), ಹೂವಿನ ಪಲ್ಲಕ್ಕಿ, ನಂದಿ (Nandi) , ಒನಕೆ ಓಬವ್ವ (Onake Obavva), ನೀರಜ್‌ ಚೋಪ್ರಾ (Niraj Chopra) ಹೂವಿನಲ್ಲಿ ಮೂಡಲಿದ್ದಾರೆ. ಮಕ್ಕಳಿಗಾಗಿ ಹೂವಿನಲ್ಲಿ ಟಾಮ್ ಅಂಡ್‌ ಜರ್ರಿ (Tom and Jerry) ಪ್ರತಿಕೃತಿ ಜೊತೆಗೆ ಗೊಂಬೆಗಳ ಪ್ರದರ್ಶನವೂ (Doll Show) ಇರಲಿದ್ದು ಛಾಯಾಚಿತ್ರ ಪ್ರದರ್ಶನ (Photography Exhibition) ಏರ್ಪಡಿಸಲಾಗಿದೆ.

ಡಿ.25 ರಿಂದ 31 ರವರೆಗೆ ಪ್ರತಿದಿನ ಸಂಜೆ ಅರಮನೆ ಮುಂಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 25 ರಂದು ಸಂಜೆ 7.30 ರಿಂದ 9.30 ರವರೆಗೆ ಗಾಯಕ ವಿಜಯ ಪ‍್ರಕಾಶ್‌ ನೇತೃತ್ವದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಗೀತ ನಮನ ಸಲ್ಲಿಸಲಾಗುತ್ತದೆ. 26 ರಂದು ಸಂಜೆ 7 ರಿಂದ 9 ರವರೆಗೆ ಸಂಗೀತ ಕಾರ್ಯಕ್ರಮ, 27 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸಂಗೀತ, ನೃತ್ಯ, 31 ರಂದು ರಾತ್ರಿ 11 ರಿಂದ 12 ಗಂಟೆವರೆಗೆ ಪೊಲೀಸ್‌ ಬ್ಯಾಂಡ್‌ ವಾದನ ಇರಲಿದೆ. ಹೊಸ ವರ್ಷಾಚರಣೆ ಅಂಗವಾಗಿ ಶಬ್ದರಹಿತ ಪಟಾಕಿ ಸಿಡಿಸಲಾಗುತ್ತದೆ.

ಡಿಸೆಂಬರ್ 25 ರಂದು ಸಂಜೆ 4.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಡಿಸೆಂಬರ್ 26 ರಿಂದ ಜನವರಿ 2 ರ ವರೆಗೂ ಬೆಳಿಗ್ಗೆ 10 ರಿಂದ ರಾತ್ರಿ 8.30 ರವರೆಗೆ ಪ್ರದರ್ಶನ ನಡೆಯಲಿದೆ. ನಿತ್ಯ ರಾತ್ರಿ 7 ರಿಂದ 8.30 ರವರೆಗೆ ಅರಮನೆಯು ವಿದ್ಯುತ್‌ ದೀಪಗಳಿಂದ ಕಂಗೊಳಿಸಲಿದೆ.‌ ಕೋವಿಡ್‌ ಮಾರ್ಗಸೂಚಿ ಅನ್ವಯ ‍ಪ್ರದರ್ಶನ ನಡೆಯಲಿದ್ದು ಕೋವಿಡ್‌ ಎರಡೂ ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಒಂದು ಬಾರಿಗೆ 500 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗುವುದು’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ತಿಳಿಸಿದರು.‌

NO COMMENTS

LEAVE A REPLY

Please enter your comment!
Please enter your name here

You cannot copy content of this page