Mysuru (Mysore) : ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ (Bakrid) ಹಬ್ಬವನ್ನು ಮುಸ್ಲಿಮರು ಸಡಗಡದಿಂದ ಮೈಸೂರು ನಗರದ ಫಾರೂಕಿಯಾ ಮೈದಾನ, ರಾಜೀವ್ ನಗರ ಈದ್ಗಾ ಮೈದಾನ, ಗೌಸಿಯಾ ನಗರ ಮೈದಾನ ಸೇರಿದಂತೆ 35 ಮಸೀದಿಗಳಲ್ಲಿ ಭಾನುವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.
ಭಾನುವಾರ ಮಳೆ ಕೊಂಚ ಬಿಡುವು ನೀಡಿದ್ದರಿಂದ ಹಬ್ಬದ ಸಡಗಡಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಶಾಸಕ ತನ್ವೀರ್ ಸೇಠ್ (Tanveer Sait) ಸೇರಿದಂತೆ ನೂರಾರು ಮಂದಿ ಅಶೋಕ ರಸ್ತೆ ತಚ್ಚಿವ್ ಮೆಮನ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.