back to top
26.8 C
Bengaluru
Tuesday, November 11, 2025
HomeNewsಸೂಪರ್ ಸ್ಟಾರ್ Rajinikanth Hospital ಗೆ ದಾಖಲು-ಅಭಿಮಾನಿಗಳಲ್ಲಿ ಆತಂಕ

ಸೂಪರ್ ಸ್ಟಾರ್ Rajinikanth Hospital ಗೆ ದಾಖಲು-ಅಭಿಮಾನಿಗಳಲ್ಲಿ ಆತಂಕ

- Advertisement -
- Advertisement -

Chennai: ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದು, ಈ ಬೆಳವಣಿಗೆ ಅಭಿಮಾನಿಗಳಲ್ಲಿ(fans) ಆತಂಕ ಹೆಚ್ಚಾಗುವಂತೆ ಮಾಡಿದೆ.

ರಜನಿಕಾಂತ್ (Rajinikanth) ಅವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಚಿಕಿತ್ಸೆಗಾಗಿ ಸೋಮವಾರ ತಡರಾತ್ರಿ ಚೆನ್ನೈನ (Chennai) ಆಯರ್ವಿಳಕ್ಕು ಪ್ರದೇಶದ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು ಕೂಡ ರಜನಿಕಾಂತ್ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಈ ರೀತಿ ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ಆತಂಕ ಹೆಚ್ಚಿದೆ. ಆದಾಗ್ಯೂ ಅವರು ಸಿನಿಮಾ ಕೃಷಿಯನ್ನು ನಿಲ್ಲಿಸಿಲ್ಲ ಅನ್ನೋದು ವಿಶೇಷ.

ರಜನಿಕಾಂತ್ ನಟನೆಯ ‘ವೆಟ್ಟೈಯಾನ್’ (Vettaiyaan) ಸಿನಿಮಾ ಅಕ್ಟೋಬರ್ 10ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ರಜನಿಕಾಂತ್ ಅಮಿತಾಭ್ ಬಚ್ಚನ್, (Amitabh Bachchan) ಫಹಾದ್ ಫಾಸಿಲ್ (Fahadh Faasil) ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ರಿಲೀಸ್ ಸಂದರ್ಭದಲ್ಲಿ ರಜನಿಕಾಂತ್ ಅರೋಗ್ಯ ಕೆಟ್ಟಿರುವುದು ಸಹಜವಾಗಿಯೇ ಅವರ ಫ್ಯಾನ್ಸ್ಗೆ ಆತಂಕ ಮೂಡಿಸಿದೆ.

ರಜನಿಕಾಂತ್ಗೆ ಕಾರ್ಡಿಯಾಕ್ ಕ್ಯಾಥ್ ಕ್ಯಾಬ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದ್ದು, ತಮ್ಮ ನೆಚ್ಚಿನ ನಟ ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page