Sabarimala: ದಕ್ಷಿಣ ಭಾರತದ (South India) ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಶಬರಿಮಲೆ (Sabarimala) ಅಯ್ಯಪ್ಪಸ್ವಾಮಿ ದೇವಾಲಯ (Ayyappaswamy Temple) ಒಂದಲ್ಲಾ ಒಂದು ರೀತಿಯ ವಿವಾದಗಳಿಂದ ಈಗ ಸುದ್ದಿಯಾಗುತ್ತಿದೆ.
ಈ ಹಿಂದೆ ಅತೀ ಹೆಚ್ಚು ಭಕ್ತರು ಒಂದೇ ದಿನ ಆಗಮಿಸಿದ್ದ ಕಾರಣ ಭಾರೀ ನೂಕುನುಗ್ಗಲು, ಕಾಲ್ತುಳಿತ ಉಂಟಾಗಿ ಬಾರಿ ದುರಂತಗಳು ಸಂಭವಿಸಿದ್ದವು.
ಇದಾದ ಬಳಿಕ ಅಯ್ಯಪ್ಪ ಸ್ವಾಮಿ ಅರವಣ ಪ್ರಸಾದದಲ್ಲಿ (Aravan Prasad) ಕೀಟನಾಶಕ (pesticide) ಅಂಶ ಪತ್ತೆಯಾದ ಸುದ್ದಿ ಈಗ ಮತ್ತೆ ಮುನ್ನಲೆಗೆ ಬಂದಿದೆ. ಕಳೆದೊಂದು ವರ್ಷದ ಹಿಂದೆ ಅಯ್ಯಪ್ಪ ಸ್ವಾಮಿಯ ಪ್ರಸಾದವಾದ ಆರವಣದಲ್ಲಿ ಕೀಟನಾಶಕ ಅಂಶ ಪತ್ತೆಯಾಗಿತ್ತು.
ಈ ಘಟನೆ ಸುಪ್ರೀಂಕೋರ್ಟ್(Supreme Court) ಮೆಟ್ಟಿಲೇರುವಂತೆ ಮಾಡಿತ್ತು. ಆದರೆ ಇನ್ನು ವಿಚಾರಣೆ ನಡೆಯುತ್ತಿದೆ. ಆದರೆ ಇದಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.
ಆದರೆ ಈ ನಡುವೆ ಅಯ್ಯಪ್ಪನ ಸನ್ನಿಧಾನದಲ್ಲಿ ಅರವಣ ಪ್ರಸಾದ ಹಂಚಿಕೆ ನಿಷೇಧಿಸಲಾಗಿತ್ತು. ಹಾಗೆ ದೇವಾಲಯದಲ್ಲಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಅರವಣ ಸಂಗ್ರಹ ಹಾಗೆಯೆ ಉಳಿದಿತ್ತು.
ಅರವಣ ಪ್ರಸಾದ ಮಾಡುವಾಗ ಬಳಸಲಾಗುವ ಏಲಕ್ಕಿ ಮೂಲಕ ಈ ಕೀಟನಾಶಕ ಪ್ರಮಾಣ ಪ್ರಸಾದದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿತ್ತು, ಈ ಏಲಕ್ಕಿಗಳಿಗೆ ನಿಗದಿಗಿಂತ ಹೆಚ್ಚಿನ ಕೀಟನಾಶಕ ಬಳಸಿ ಬೆಳೆಯಲಾಗಿತ್ತು.
ಪ್ರಸಾದ ತಯಾರಿಕೆಗೂ ಮುನ್ನ ಏಲಕ್ಕಿಯನ್ನು ಶುಚಿಗೊಳಿಸಿದ ಹೊರತಾಗಿಯೂ ಅದರಲ್ಲಿ ಕೀಟನಾಶಕ ಅಂಶ ಉಳಿದು ಅಪಾಯಕ್ಕೆ ಕಾರಣವಾಗಿತ್ತು.
ಈಗ ಉಳಿದಿರುವ ಈ ಅರವಣ ಪ್ರಸಾದವನ್ನು ದೇವಾಲಯ ಕಮಿಟಿ ಗೊಬ್ಬರವನ್ನಾಗಿ ಮಾಡಲು ಮುಂದಾಗಿದೆ. ಸುಮಾರು 6 ಕೋಟಿ ಮೌಲ್ಯದ ಪ್ರಸಾದ ಸಂಗ್ರಹವಾಗಿದ್ದು, ಇದನ್ನು ನಾಶ ಮಾಡಬೇಕಾದ ಸ್ಥಿತಿ ಬಂದಿದೆ.
ಇದನ್ನು ಭಕ್ತರಿಗೆ ಹಂಚುವುದು ಕಾನೂನು ಬಾಹಿರವಾಗಲಿದೆ ಹೀಗಾಗಿ ಇದನ್ನು ಸಾವಯವ ಗೊಬ್ಬರವನ್ನಾಗಿ ಮಾಡಲು ಕಮಿಟಿ ನಿರ್ಧರಿಸಿದೆ.