Home Karnataka “ತನಿಖೆಗೆ ಸಹಕಾರ ನೀಡುವುದು ಅವಶ್ಯಕ, ಗೌಪ್ಯತೆ ಕಾರಣ ಹೇಳಿ ತಪ್ಪಿಸಿಕೊಳ್ಳಲಾಗದು: High Court”

“ತನಿಖೆಗೆ ಸಹಕಾರ ನೀಡುವುದು ಅವಶ್ಯಕ, ಗೌಪ್ಯತೆ ಕಾರಣ ಹೇಳಿ ತಪ್ಪಿಸಿಕೊಳ್ಳಲಾಗದು: High Court”

274
High Court

Bengaluru: ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಪಟ್ಟ ಪ್ರಕರಣದಲ್ಲಿ ಹಣ ಕಳೆದುಕೊಂಡವರ ಖಾತೆಗಳ ಮಾಹಿತಿ ವಿಚಾರಣೆ ಸಂಬಂಧ ಜಾರಿ ಮಾಡಲಾಗಿದ್ದ ಸಮನ್ಸ್ ಅನ್ನು ಪ್ರಶ್ನಿಸಿ, ಡಿಜಿಟಲ್ ಪಾವತಿ ಸೇವೆ ನೀಡುವ ಫೋನ್ ಪೇ (PhonePe) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ನೇತೃತ್ವದ ಪೀಠ, “ಗೌಪ್ಯತೆ ಎಂಬುದು ಕಾನೂನುಬದ್ಧ ತನಿಖೆಗೆ ಅಡ್ಡಿಯಾಗಬಾರದು. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ದತ್ತಾಂಶವು ಸಹಕಾರಿಯಾಗಬೇಕು,” ಎಂದು ಸ್ಪಷ್ಟಪಡಿಸಿದೆ.

ಫೋನ್ ಪೇ ಪರ ವಕೀಲರು, “ಪಾವತಿ ಮತ್ತು ಸೆಟ್ಲಮೆಂಟ್ ಕಾಯಿದೆಯಡಿಯಲ್ಲಿ ಫೋನ್ ಪೇ ಕಾರ್ಯನಿರ್ವಹಿಸುತ್ತಿದೆ. ನ್ಯಾಯಾಲಯದ ಆದೇಶವಿಲ್ಲದೆ ಯಾವುದೇ ಖಾಸಗಿ ಮಾಹಿತಿಯನ್ನು ಒದಗಿಸಲು ಸಾಧ್ಯವಿಲ್ಲ,” ಎಂದು ವಾದಿಸಿದರು. ಆದರೆ ನ್ಯಾಯಪೀಠ ಈ ವಾದವನ್ನು ತಿರಸ್ಕರಿಸಿ, “ಬ್ಯಾಂಕರ್ಸ್ ಬುಕ್ಸ್ ಎವಿಡೆನ್ಸ್ ಕಾಯಿದೆಯಡಿ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂಬ ಹೇಳಿಕೆ ಒಪ್ಪಲಾಗದು,” ಎಂದು ಸ್ಪಷ್ಟಪಡಿಸಿದೆ.

ಸಾಂಪ್ರದಾಯಿಕ ಅಪರಾಧಗಳು ಇತ್ತೀಚೆಗೆ ಕಡಿಮೆಯಾದರೆ, ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಇವುಗಳಿಗೆ ತಕ್ಷಣ ಸ್ಪಂದಿಸಬೇಕಾದ ಅಗತ್ಯವಿದೆ. ಡಿಜಿಟಲ್ ಪುರಾವೆಗಳನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ಅಧಿಕಾರ ನೀಡಬೇಕು. ಆದರೆ, ಈ ಸಂದರ್ಭದಲ್ಲಿ ಗೌಪ್ಯತೆಯ ಆಶ್ರಯದಲ್ಲಿ ತನಿಖೆಗೆ ತಡೆ ಉಂಟುಮಾಡಬಾರದು.

ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರು ಕ್ರಿಕೆಟ್ ಬೆಟ್ಟಿಂಗ್ ಆ್ಯಪ್‌ಗಳಿಗೆ ಫೋನ್ ಪೇ ಮೂಲಕ ಹಣ ಪಾವತಿಸಿದ್ದರು. ಹಣ ಮರಳದ ಹಿನ್ನೆಲೆಯಲ್ಲಿ ಅವರು ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, CrPC ಸೆಕ್ಷನ್ 91ರ ಅಡಿಯಲ್ಲಿ ಫೋನ್ ಪೇಗೆ ಸಮನ್ಸ್ ಜಾರಿಮಾಡಲಾಗಿತ್ತು. ಈ ಸಮನ್ಸ್ ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆಹೋದರು, ಆದರೆ ನ್ಯಾಯಾಲಯ ಅವರ ಅರ್ಜಿಯನ್ನು ವಜಾ ಮಾಡಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page