New Delhi: ಸುಪ್ರೀಂಕೋರ್ಟ್ (Supreme Court CJI) ಮುಖ್ಯ ನ್ಯಾಯಮೂರ್ತಿ ಧನಂಜಯ ವೈ. ಚಂದ್ರಚೂಡ್ (Dhananjaya Y. Chandrachud) ಕೇಂದ್ರ ಕಾನೂನು ಸಚಿವಾಲಯಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ನ್ಯಾಯಮೂರ್ತಿ ಸಂಜೀವ್ ಖನ್ನಾ (Sanjiv Khanna) ಅವರು ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಬೇಕು ಎಂದು ಶಿಫಾರಸು ಮಾಡಿದ್ದಾರೆ.
ಧನಂಜಯ ವೈ. ಚಂದ್ರಚೂಡ್ (Dhananjaya Y. Chandrachud) ನವೆಂಬರ್ 9, 2022ರಂದು ಅಧಿಕಾರವಹಿಸಿಕೊಂಡಿದ್ದರು. ನವೆಂಬರ್ 10ರಂದು ವಯೋನಿವೃತ್ತಿ ಕಾರಣಕ್ಕೆ ಅವರ ಅವಧಿ ಪೂರ್ಣಗೊಳ್ಳಲಿದೆ.
ಅವರು ಡಿಸೆಂಬರ್ 17, 2022 ರಂದು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರ ತಂದೆ Y V ಚಂದ್ರಚೂಡ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (CJI)ಯಾಗಿದ್ದು ಫೆಬ್ರವರಿ 22, 1978 ರಿಂದ ಜುಲೈ 11, 1985 ರವರೆಗೆ ಸ್ಥಾನದಲ್ಲಿದ್ದರು.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನವೆಂಬರ್ 10, 2024 ರಿಂದ ಮೇ 13, 2025 ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವ ನಿರೀಕ್ಷೆಯಿದೆ.
ಖನ್ನಾ ಅವರು 14 ವರ್ಷಗಳ ಕಾಲ ದೆಹಲಿ ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದರು. ಅವರು ತೆರಿಗೆ, ವಾಣಿಜ್ಯ ಕಾನೂನುಗಳಲ್ಲಿ ತಮ್ಮ ಪರಿಣತಿ ಹೊಂದಿದ್ದಾರೆ. ಆರಂಭದಲ್ಲಿ ದೆಹಲಿಯ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಿದ್ದರು.