Kachchh, Gujarat : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುಜರಾತಿನ ಕಚ್ಛ್ ಜಿಲ್ಲೆಯಲ್ಲಿ ಗುರುವಾರ ಸಶಸ್ತ್ರ ಪಡೆ ಸಿಬ್ಬಂದಿಯೊಂದಿಗೆ (Armed Forces) ದೀಪಾವಳಿಯನ್ನು (Diwali) ಆಚರಿಸಿದರು, ಸೈನಿಕರೊಂದಿಗೆ ಹಬ್ಬವನ್ನು ಕಳೆಯುವ ತಮ್ಮ ವಾರ್ಷಿಕ ಸಂಪ್ರದಾಯವನ್ನು ಮುಂದುವರೆಸಿದರು. ಈ ವರ್ಷ ಅವರು ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಲಕ್ಕಿ ನಾಲಾ ಪ್ರದೇಶಕ್ಕೆ ಭೇಟಿ ನೀಡಿದ್ದರು.
ತಮ್ಮ ಭೇಟಿಯ ವೇಳೆ ದೂರದ ಗಡಿ ಪ್ರದೇಶವಾದ ಸರ್ ಕ್ರೀಕ್‌ನಲ್ಲಿ ಬಿಎಸ್‌ಎಫ್, ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿಯನ್ನು ಭೇಟಿಯಾದ ಮೋದಿ, ಅಲ್ಲಿ ಸೈನಿಕರಿಗೆ ಸಿಹಿತಿಂಡಿಗಳನ್ನು ನೀಡಿ ಮೆಚ್ಚುಗೆ ಸೂಚಿಸಿದರು.
ಈ ಪ್ರದೇಶವು ತುಂಬಾ ಬಿಸಿಯಾದ ದಿನಗಳು ಮತ್ತು ತಂಪಾದ ರಾತ್ರಿಗಳೊಂದಿಗೆ ತನ್ನ ಕಠಿಣ ಪರಿಸ್ಥಿತಿಗಳಿಗೆ ಹೆಸರುವಾಸಿಯಾಗಿದೆ.
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ ಜನ್ಮದಿನದಂದು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.