Karnataka : ಕರ್ನಾಟಕ ಕಂದಾಯ (Revenue) ಮತ್ತು ಭೂ ಮಾಪನ (Bhoomi) ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತಹ ಹೊಸ ಯೋಜನೆಗೆ ನಾಂದಿ ಹಾಡಲಾಗಿದ್ದು ಇನ್ನುಮುಂದೆ ರೈತರಿಗೆ ಪಹಣಿಯಲ್ಲಿ (Pahani with Land Map) ಭೂ ನಕ್ಷೆಯನ್ನು ಸಹ ನೀಡಲಾಗುತ್ತದೆ. ಹೊಸ ಪಹಣಿ ಪಾತ್ರದಲ್ಲಿ ಹಳೆಯ ಪಹಣಿಯಂತೆ ದಾಖಲೆಗಲ್ಲಿದ್ದು ಎಡಗಡೆ ಡಿಜಿಟಲ್ ಸ್ಕೆಚ್ ಇರಲಿದೆ. ಜಮೀನಿನ ವಿಸ್ತರಣೆ, ವಿಳಾಸ, ಒತ್ತುವರಿ ಮಾಹಿತಿ, QR Code, Barcode ಒಳಗೊಂಡ ಹೊಸ ಪಹಣಿ ಇನ್ನುಮುಂದೆ ರೈತರಿಗೆ ಸಿಗಲಿದೆ.
ಪ್ರಸ್ತುತ ಪಹಣಿಯಲ್ಲಿ ಜಮೀನಿನ ರೆಕಾರ್ಡ್ ಆಫ್ ರೈಟ್ಸ್, ಗಣಿ ಮತ್ತು ಪಹಣಿ ಪತ್ರಿಕೆ ಫಾರ್ಮ್ ನೋ 16 ರಲ್ಲಿ ಜಮೀನಿನ ವಿಸ್ತೀರ್ಣ, ಕಂದಾಯ, ಸ್ವಾಧೀನದರರ ಹೆಸರು, ತಂದೆಯ ಹೆಸರು ಮತ್ತು ವಿಳಾಸ, ಸ್ವಾದೀನತೆಯ ರೀತಿ, ಇತರೆ ಹಕ್ಕುಗಳು, ಮಣ್ಣಿನ ನಮೂನೆ, ನೀರಾವರಿ ಮೂಲ ಸೇರಿದಂತೆ ಜಮೀನಿನ ಮಾಹಿತಿ ಇರುತ್ತದೆ. ಈಗ ಪಹಣಿ ಪತ್ರದಲ್ಲಿ ಭೂ ನಕ್ಷೆಯನ್ನು ನಮೂದಿಸುವುದರಿಂದ ವಂಚನೆಗೆ ಕಡಿವಾಣ ಬಿದ್ದು ರೈತರಿಗೆ ಅನೂಕೂಲವಾಗಲಿದೆ, ಪ್ರಸ್ತುತ ಈ ಯೋಜನೆ ಪ್ರಾಯೋಗಿಕವಾಗಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಜಾರಿಗೊಳಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.