Bangalore : ಕರ್ನಾಟಕ ದ್ವಿತೀಯ ಪಿಯುಸಿ (Karnataka 2nd PUC) ಪರೀಕ್ಷೆಯ ಫಲಿತಾಂಶ (Results) ಪ್ರಕಟವಾಗಿದ್ದು ಪರೀಕ್ಷೆ ಬರೆದ ಒಟ್ಟು 6,83,563 ವಿದ್ಯಾರ್ಥಿಗಳ ಪೈಕಿ ಶೇ.61.88 ರಷ್ಟು ವಿದ್ಯಾರ್ಥಿಗಳು (4,22,966 ವಿದ್ಯಾರ್ಥಿಗಳು) ಉತ್ತೀರ್ಣರಾಗಿದ್ದಾರೆ ಎಂದು ಟ್ವೀಟ್ ಮೂಲಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C. Nagesh) ತಿಳಿಸಿದ್ದಾರೆ.
ಶೇ.68.72 ಬಾಲಕಿಯರು ಮತ್ತು ಶೇ.55.22 ಬಾಲಕರು ಉತ್ತೀರ್ಣರಾಗಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಈ ವರ್ಷ ಮೊದಲ ಸ್ಥಾನ ಪಡೆದಿದೆ. ಪೂರಕ ಪರೀಕ್ಷೆ ದಿನಾಂಕ ಈ ತಿಂಗಳ ಕೊನೆಗೆ ಪ್ರಕಟವಾಗಲಿದೆ
ದ್ವಿತೀಯ ಪಿಯು ಫಲಿತಾಂಶವನ್ನು ಇಲಾಖೆಯ ವೆಬ್‌ಸೈಟ್ http://karresults.nic.In ನಲ್ಲಿ ಮಧ್ಯಾಹ್ನ 12 ಗಂಟೆಯ ಬಳಿಕ ನೋಡಬಹುದು ಎಂದು ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
- Advertisement -