Kolar Gold Fields (KGF), Kolar : “ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳಬೇಕು,” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅಭಿಪ್ರಾಯ ಪಟ್ಟರು.
ಊರಿಗಾಂನ ಡಾ.ಟಿ. ತಿಮ್ಮಯ್ಯ ಕಾಲೇಜಿನಲ್ಲಿ (DrTTIT) ಶನಿವಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಪ್ರತಿಯೊಬ್ಬ ಕ್ಷೇತ್ರದಲ್ಲಿ ಯುವಕರಿಗೆ ಪ್ರಮುಖ ಪಾತ್ರವಿದೆ.
ಯುವಕರು ಕಲಿಯುವ ಉತ್ಸಾಹದಿಂದ ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಯುವಕರೇ ಮುಖ್ಯ ಶಕ್ತಿ. ತಮ್ಮ ಶಕ್ತಿಯನ್ನು ಉತ್ತಮ ಹವ್ಯಾಸಗಳನ್ನು ಬೆಳೆಸಲು ಬಳಸಿಕೊಳ್ಳಬೇಕು, ನಾಡು ಮತ್ತು ಕುಟುಂಬಕ್ಕೆ ಆಸ್ತಿಯಾಗಬೇಕು,” ಎಂದರು.
ಇತ್ತೀಚೆಗೆ, ಮಾದಕ ವಸ್ತುಗಳಿಂದ ಯುವಕರು ತಮ್ಮ ಭವಿಷ್ಯವನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಅವರು ತಿಳಿಸಿದರು. “ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬಹುದು. ಮಾದಕ ವಸ್ತುಗಳನ್ನು ತ್ಯಜಿಸಲು ನಡೆಯುವ ಆಂದೋಲನದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು,” ಎಂದರು.
ಇದ ನಂತರ, ಮಾದಕ ವಸ್ತುಗಳನ್ನು ಬಳಸದಿರುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಪ್ರಾಂಶುಪಾಲೆ ಸುಜಾತ ಹಾಗೂ ಅಗ್ನಿಪಥ ತರಬೇತುದಾರ ಪ್ರಕಾಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.