ಬಾಂಗ್ಲಾದೇಶದಲ್ಲಿ (Bangladesh) ಹಿಂದೂ ಸಮುದಾಯದ ಮೇಲೆ ದಾಳಿಗಳು ಹೆಚ್ಚುತ್ತಿರುವ ಹಿನ್ನೆಲೆ, ಕೋಲ್ಕತ್ತಾ ಇಸ್ಕಾನ್ (ISKCON) ಕೆಲವು ಮುನ್ನೆಚ್ಚರಿಕೆ ಸಲಹೆಗಳನ್ನು ನೀಡಿದೆ.
ಇಸ್ಕಾನ್ (ISKCON) ಸಹೋದ್ಯೋಗಿಗಳು ಹಾಗೂ ಅನುಯಾಯಿಗಳಿಗೆ ಕೇಸರಿ ಬಟ್ಟೆ ಧರಿಸಬೇಡಿ, ಜಪಮಣಿಗಳು ಎದುರು ಕಾಣಿಸದಂತೆ ನೋಡಿಕೊಳ್ಳಿ, ಮತ್ತು ತಿಲಕವನ್ನು ಇರಿಸಬೇಡಿ ಎಂದು ಕೋಲ್ಕತ್ತಾ ಇಸ್ಕಾನ್ ವಕ್ತಾರ ರಾಧರಮ್ ದಾಸ್ ತಿಳಿಸಿದ್ದಾರೆ.
ಇದೊಂದು ಗಂಭೀರ ಪರಿಸ್ಥಿತಿ. ಹಿಂದೂಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಅಗತ್ಯವಿದೆ ಎಂದು ರಾಧರಮ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತ್ತಾ ನಿವಾಸಿ ಸಾಯನ್ ಘೋಷ್ ಅವರು ಬಾಂಗ್ಲಾದೇಶ ಪ್ರವಾಸದ ವೇಳೆ ದಾಳಿಗೆ ಒಳಗಾದ ಘಟನೆಯು ಅಳಕು ಮೂಡಿಸಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರ ಬಿಡುಗಡೆಗೆ ಒತ್ತಾಯಿಸಿ, ಪಶ್ಚಿಮ ಬಂಗಾಳದ ಪೆಟ್ರಾಪೋಲ್ ಗಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಂತರು ಪ್ರತಿಭಟನೆ ನಡೆಸಿದ್ದಾರೆ.