ಇತ್ತೀಚೆಗೆ ನಡೆದ IPL ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬಿಕರಿಯಾಗದ ವಿದೇಶಿ ಆಟಗಾರರ ಮೇಲೆ ಪಾಕಿಸ್ತಾನ (Pakistan) ಸೂಪರ್ ಲೀಗ್ (PSL-Pakistan Super League) ಫ್ರಾಂಚೈಸಿಗಳು ಕಣ್ಣಿಟ್ಟಿವೆ.
ಆ ಆಟಗಾರರ ಹೆಸರುಗಳನ್ನು ಪಿಎಸ್ಎಲ್ ಡ್ರಾಫ್ಟ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಐಪಿಎಲ್ ಮತ್ತು ಪಿಎಸ್ಎಲ್ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಹುಶಃ ಒಂದೇ ಸಮಯದಲ್ಲಿ ನಡೆಯಲಿದ್ದು, ಕೆಲವರು ಐಪಿಎಲ್‌ಗೆ ಮಣೆ ಹಾಕಿದ್ದಾರೆ.
ಈ ಪೈಕಿ, ಹರಾಜಾಗದೆ ಉಳಿದ ಆಟಗಾರರ ಪಟ್ಟಿ ಸಿದ್ಧಪಡಿಸಿರುವ ಪಿಎಸ್ಎಲ್ ಫ್ರಾಂಚೈಸಿಗಳು, ಅದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಲ್ಲಿಸಿ, ಅವುಗಳು ಸ್ಪರ್ಧೆ ಪಾಲ್ಗೊಳ್ಳಲು ಸೂಚನೆ ನೀಡಿವೆ.
ಪ್ರಮುಖ ಆಟಗಾರರಾಗಿ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಡ್ಯಾರಿಲ್ ಮಿಚೆಲ್ ಸೇರಿದಂತೆ ಇನ್ನೂ ಹಲವರು PSLನಲ್ಲಿ ಆಡಲು ನಿರೀಕ್ಷಿಸಲಾಗಿದೆ.