ಜನಪ್ರಿಯ ರಿಲಯನ್ಸ್ ಜಿಯೋ ಸಂಸ್ಥೆ (Reliance Jio company) ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗಾಗಿ ಜಿಯೋಟ್ಯಾಗ್ ಗೋ (JioTag Go tracker) ಟ್ರ್ಯಾಕರ್ ಅನ್ನು ಬಿಡುಗಡೆ ಮಾಡಿದೆ. IOS ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಿಗೂ ಇದು ಲಭ್ಯವಾಗಿದೆ. ಈ ಡಿವೈಸ್ ಬ್ಲ್ಯಾಕ್, ಆರೆಂಜ್, ವೈಟ್ ಮತ್ತು ಯೆಲ್ಲೋ ಬಣ್ಣಗಳಲ್ಲಿ ಖರೀದಿಸಲು ಸಿಗುತ್ತದೆ.
ಜಿಯೋ ಟ್ಯಾಗ್ ಗೋ ಟ್ರ್ಯಾಕರ್ ಗೂಗಲ್ ಫೈಂಡ್ ಮೈ ಡಿವೈಸ್ ನೆಟ್‌ವರ್ಕ್‌ನೊಂದಿಗೆ ಸರಾಗವಾಗಿ ಕೆಲಸ ಮಾಡುತ್ತದೆ. ಇದು ನೈಜ-ಸಮಯದ ಸ್ಥಳವನ್ನು ನೀಡಲು ಹತ್ತಿರದ ಆಂಡ್ರಾಯ್ಡ್ ಸಾಧನವನ್ನು ಬಳಸುತ್ತದೆ. ಇದನ್ನು ಕೀಲಿಗಳು, ಪರ್ಸುಗಳು, ಲಗೇಜು, ಗ್ಯಾಜೆಟ್ ಗಳು ಮತ್ತು ಇನ್ನಷ್ಟು ವಸ್ತುಗಳನ್ನು ಟ್ರ್ಯಾಕ್ ಮಾಡಲು ಬಳಸಿಬಹುದು.
ಜಿಯೋ ಟ್ಯಾಗ್ ಗೋ ಟ್ರ್ಯಾಕರ್ ಅನ್ನು ಗ್ರಾಹಕರು ಅಮೆಜಾನ್, ಜಿಯೋಮಾರ್ಟ್, ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ₹1499ರ ಬೆಲೆಗೆ ಖರೀದಿಸಬಹುದು.