back to top
21.2 C
Bengaluru
Friday, November 15, 2024
HomeBusinessದೀಪಾವಳಿಗೆ Jio ದಿಂದ 3 ತಿಂಗಳ free subscription

ದೀಪಾವಳಿಗೆ Jio ದಿಂದ 3 ತಿಂಗಳ free subscription

- Advertisement -
- Advertisement -

Mumbai: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ (Mukesh Ambani) ಒಡೆತದ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ gift ಗಳನ್ನು ನೀಡುತ್ತಿದೆ.

ಇದೀಗ ಮ್ಯೂಸಿಕ್-ಸ್ಟ್ರೀಮಿಂಗ್ ಪ್ಲಾಟ್‌ಫಾರಂ ಜಿಯೋ ಸಾವನ್‌ನಿಂದ (Jio Saavn Pro) ಹಬ್ಬಕ್ಕೂ ಮೊದಲೇ ಗಿಫ್ಟ್ ಘೋಷಣೆ ಮಾಡಿದೆ. ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ಬಳಕೆದಾರರು ಮೂರು ತಿಂಗಳು  Jio Saavn Pro subscription ಪಡೆದುಕೊಳ್ಳಬಹುದಾಗಿದೆ.

ಈ ಉಚಿತ ಸಬ್‌ಸ್ಕ್ರಿಪ್ಷನ್‌ನಿಂದಾಗಿ ಬಳಕೆದಾರರು ಹೈ ಕ್ವಾಲಿಟಿಯಲ್ಲಿ ಅನ್‌ಲಿಮಿಟೆಡ್ ಮ್ಯೂಸಿಕ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವಿಶೇಷ ಆಫರ್ ಕೇವಲ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎಂದು ಜಿಯೋ ಸಾವನ್ ಮಾಹಿತಿ ನೀಡಿದೆ.

ಈ ಆಫರ್ Android, iOS, JioPhone ಮತ್ತು ವೆಬ್‌ ಸೇರಿದಂತೆ ಎಲ್ಲಾ ಡಿವೈಸ್‌ ಮತ್ತು ಇತರೆ ಪ್ಲಾಟ್‌ಫಾರಂನಲ್ಲಿ ಲಭ್ಯವಿದೆ. ಹೊಸ ಬಳಕೆದಾರರಿಗೆ ವಿಭಿನ್ನ ಮತ್ತು ಉತ್ತಮ ಗುಣಮಟ್ಟದ ಅನುಭವವನ್ನು ನೀಡುವುದು ಈ ಆಫರ್ ಉದ್ದೇಶವಾಗಿದೆ. ಈ ಆಫರ್ JioSaavn Pro ಇಂಡಿವ್ಯೂಸಲ್ ಸಬ್‌ಸ್ಕ್ರಿಪ್ಷನ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.

ಇಂಡಿವ್ಯೂಸಲ್ ಪ್ಲಾನ್ ಜೊತೆಯಲ್ಲಿ JioSaavn ಡ್ಯುಯಲ್ ಮತ್ತು ಫ್ಯಾಮಿಲಿ ಪ್ಲಾನ್ ಸಹ ಒಳಗೊಂಡಿದೆ. ಡ್ಯೂಯಲ್ ಪ್ಲಾನ್‌ನಲ್ಲಿ ಒಂದು ಅಕೌಂಟ್‌ನಲ್ಲಿ ಇಬ್ಬರು ಮೆಂಬರ್‌ಶಿಪ್ ಪಡೆಯಬಹುದು.

ಫ್ಯಾಮಿಲಿ ಪ್ಲಾನ್‌ನಲ್ಲಿ ಕುಟುಂಬದ ಐವರು ಸದಸ್ಯರು ಸಬ್‌ಸ್ಕ್ರಿಪ್ಷನ್ ಪಡೆದುಕೊಂಡು ಮನರಂಜನೆಯನ್ನು ಆನಂದಿಸಬಹುದಾಗಿದೆ. ಇದರಲ್ಲಿ ಐವರಿಗೂ ಪರ್ಸನಲ್ ಪ್ರೋ ಅಕೌಂಟ್ ಇರಲಿದೆ. ಈ ಎರಡೂ ಪ್ಲಾನ್‌ಗಳ ಬೆಲೆ ಕ್ರಮವಾಗಿ 149 ರೂಪಾಯಿ ಮತ್ತು 179 ರೂಪಾಯಿ ಆಗಿರುತ್ತದೆ.

JioSaavn ಪ್ರೊ ಸಬ್‌ಸ್ಕ್ರಿಪ್ಷನ್‌ನಲ್ಲಿ ಜಾಹೀರಾತುಗಳ ಅಡೆತಡೆಯಿಲ್ಲದ ಸಂಗೀತವನ್ನು ಆನಂದಿಸಬಹುದು. ಆಪ್‌ನಲ್ಲಿ ಹಾಡುಗಳನ್ನು ಡೌನ್‌ಲೋಡ್ ಮಾಡಿಕೊಂಡು, ಇಂಟರ್‌ನೆಟ್ ಇಲ್ಲದೇ ಕೇಳುವ ಅವಕಾಶವೂ ಲಭ್ಯವಿದೆ.

MP3 ಫೈಲ್‌ಗಳಿಗೆ ಹೆಚ್ಚಿನ ಬಿಟ್ರೇಟ್ ಆಗಿರುವ 320kbps ನಲ್ಲಿ ಉತ್ತಮ ಗುಣಮಟ್ಟದ ಸಂಗೀತ ಸ್ಟ್ರೀಮಿಂಗ್ ಅನ್ನು ಸಹ ಸಕ್ರಿಯಗೊಳಿಸುತ್ತದೆ. ನಿಮ್ಮ ಜಿಯೋ ಸಂಖ್ಯೆಗೆ ಅನಿಯಮಿತ JioTunes ಅನ್ನು ಸಹ ನೀವು ಹೊಂದಿಸಬಹುದು ಎಂದು ಮಾಹಿತಿ ನೀಡಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page