ಮೋಹಮ್ಮದ್ ಸಿರಾಜ್ ನಂತರ ಭಾರತ ಕ್ರಿಕೆಟ್ ತಂಡಕ್ಕೆ (Indian cricket team) ಮತ್ತೊಬ್ಬ DSP ಸೇರ್ಪಡೆಗೊಂಡಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ದೀಪ್ತಿ ಶರ್ಮಾ ಅವರು ಕ್ರೀಡೆಯಲ್ಲಿ ನೀಡಿದ ಕೊಡುಗೆಗಾಗಿ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (DSP) ನೇಮಕಗೊಂಡಿದ್ದಾರೆ.
ಜನವರಿ 27 ರಂದು ದೀಪ್ತಿ ಶರ್ಮಾ ಅವರನ್ನು DSPಯಾಗಿ ನೇಮಕ ಮಾಡಲಾಗಿದ್ದು, ಈ ಕುರಿತು ಅವರು ಜನವರಿ 29 ರಂದು Instagramನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಖಾಕಿ ಸಮವಸ್ತ್ರದಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಂಡ ಅವರು, ತಮ್ಮ ಕುಟುಂಬ ಮತ್ತು ಉತ್ತರ ಪ್ರದೇಶ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
2024ರಲ್ಲಿ ದೀಪ್ತಿ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 24 ವಿಕೆಟ್ ಮತ್ತು ಟಿ20ಯಲ್ಲಿ 30 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್‌ನಲ್ಲಿಯೂ ಸಹ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ 2025 ಪ್ರಮುಖ ವರ್ಷ, ಏಕೆಂದರೆ ಈ ಬಾರಿ ತವರಿನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ದೀಪ್ತಿ ಶರ್ಮಾ ತಮ್ಮ ಆಲ್ರೌಂಡರ್ ಪ್ರತಿಭೆಯಿಂದ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲಿ ಸಹಾಯ ಮಾಡಬಹುದು ಎಂದು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ.