ಭಾರತದ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಂದಾಗಿದ್ದಾರೆ. ಅವರು ಅಂತಾರಾಷ್ಟ್ರೀಯ ಕ್ರಿಕೇಟಿನಲ್ಲಿ 100 ಶತಕ ಗಳಿಸಿದ ಏಕೈಕ ಆಟಗಾರ. 664 ಪಂದ್ಯಗಳಲ್ಲಿ ಭಾಗವಹಿಸಿದ ವಿಶ್ವದ ಒಬ್ಬನೇ ಬ್ಯಾಟರ್ ಆಗಿದ್ದಾರೆ.
ಭಾರತ ತಂಡದ ಮೊದಲ ನಾಯಕ ಕರ್ನಲ್ ಸಿಕೆ ನಾಯ್ಡು ಅವರ ಗೌರವಾರ್ಥವಾಗಿ 1994ರಲ್ಲಿ ಬಿಸಿಸಿಐ ಈ ಪ್ರಶಸ್ತಿ ಜಾರಿಗೆ ತಂದಿತು. ಸಿ.ಕೆ.ನಾಯ್ಡು ಅವರು 1916 ರಿಂದ 1963ರವರೆಗೆ 47 ವರ್ಷಗಳ ಸುದೀರ್ಘ ಅವಧಿಗೆ ಪ್ರಥಮ ದರ್ಜೆ ಕ್ರಿಕೆಟ್ ಆಡಿ ವಿಶ್ವ ದಾಖಲೆ ಬರೆದಿದ್ದರು.
ಸಚಿನ್ ತೆಂಡೂಲ್ಕರ್ ಅನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ ವೇಳೆಗೆ, ರವಿಶಾಸ್ತ್ರಿ ಮತ್ತು ಫಾರೂಕ್ ಇಂಜಿನಿಯರ್ ಅವರೂ ಈ ಪ್ರಶಸ್ತಿ ಪಡೆದಿದ್ದಾರೆ.
ಸಚಿನ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ, 100 ಶತಕ ಗಳಿಸಿದ ಏಕೈಕ ಆಟಗಾರ. ODIಗಳಲ್ಲಿ 49 ಶತಕಗಳು ಮತ್ತು 96 ಅರ್ಧ ಶತಕಗಳನ್ನು ಗಳಿಸಿದ ಆಟಗಾರ.