New York: ಈ ಬಾರಿ ಯುಎಸ್ ಓಪನ್ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ (US Open Grand Slam tennis) ಹಲವು ಪ್ರಮುಖ ಬದಲಾವಣೆಗಳು ಆಗಲಿವೆ. ಟೂರ್ನಿ ಆಗಸ್ಟ್ 24 ರಿಂದ ಪ್ರಾರಂಭವಾಗುತ್ತಿದ್ದರೂ, ಮಿಶ್ರ ಡಬಲ್ಸ್ ಸ್ಪರ್ಧೆಗಳು ಆಗಸ್ಟ್ 19ರಿಂದಲೇ ಶುರುವಾಗಲಿದ್ದು, ಕೇವಲ 2 ದಿನಗಳಲ್ಲೇ (ಆ.19, 20) ಮುಕ್ತಾಯಗೊಳ್ಳಲಿದೆ.
ಇದು ಮಾತ್ರವಲ್ಲದೆ, ಪಂದ್ಯಗಳ ಅಂಕ ಗಣನೆಯಲ್ಲೂ ಬದಲಾವಣೆ ಮಾಡಲಾಗಿದೆ. ಸಾಮಾನ್ಯವಾಗಿ 6 ಗೇಮ್ ಗಳ 3 ಸೆಟ್ ಆಡುತ್ತಿದ್ದರೆ, ಈ ಬಾರಿ 4 ಗೇಮ್ ಗಳ ಪಂದ್ಯವನ್ನು ಆಯೋಜಿಸಲಾಗಿದೆ. 2 ಸೆಟ್ ಗಳ ನಂತರ ಟೈ ಆಗಿದರೆ, 10 ಅಂಕಗಳ ಟೈ ಬ್ರೇಕರ್ ನಡೆಯಲಿದೆ. ಆದರೆ ಫೈನಲ್ ಪಂದ್ಯ ಮಾತ್ರ 6 ಗೇಮ್ ಗಳ 3 ಸೆಟ್ ಹೊಂದಿರುತ್ತದೆ.
ಈ ಬಾರಿ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ 16 ತಂಡಗಳು ಮಾತ್ರ ಪಾಲ್ಗೊಳ್ಳಲಿವೆ, ಹಿಂದಿನ ಬಾರಿ 32 ತಂಡಗಳು ಭಾಗವಹಿಸಿದ್ದನ್ನು ಹೋಲಿಸಿದರೆ ಇದು ಒಂದು ದೊಡ್ಡ ಬದಲಾವಣೆ.
ಟೂರ್ನಿಯ ಬಹುಮಾನ ಮೊತ್ತವನ್ನೂ ಹೆಚ್ಚಿಸಲಾಗಿದೆ. ಮಿಶ್ರ ಡಬಲ್ಸ್ ವಿಭಾಗದ ವಿಜೇತರಿಗೆ ಈ ಬಾರಿ 1 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹8.6 ಕೋಟಿ) ನೀಡಲಾಗುವುದು. ಹಿಂದಿನ ಬಾರಿ ಈ ಮೊತ್ತ ₹1.73 ಕೋಟಿಯಾಗಿತ್ತು.
ಈ ಬದಲಾವಣೆಗಳು ಯುಎಸ್ ಓಪನ್ ಸ್ಪರ್ಧೆಯನ್ನು ಇನ್ನಷ್ಟು ಕುತೂಹಲಕಾರಿ ಮಾಡಲಿವೆ!