New Delhi: ಮೂಲಗಳ ಪ್ರಕಾರ, ಟೆಸ್ಲಾ ತನ್ನ ಬರ್ಲಿನ್ ಸ್ಥಾವರದಿಂದ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಆಮದು ಮಾಡುವ ಬಗ್ಗೆ ಯೋಚಿಸುತ್ತಿದೆ. ಈಗಾಗಲೇ ಮುಂಬೈ ಮತ್ತು ನವದೆಹಲಿಯ ಏರೋಸಿಟಿಯಲ್ಲಿ ಶೋರೂಮ್‌ಗಳಿಗೆ ಸ್ಥಳ ಗುರುತಿಸಲಾಗಿದೆ.
ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಪ್ರವೇಶಿಸಲು ಟೆಸ್ಲಾ (Tesla) ಕಂಪನಿಯು ಸಿದ್ಧವಾಗಿದೆ. ಕಂಪನಿಯ ಸಿಇಒ ಎಲಾನ್ ಮಸ್ಕ್ (Elon Musk) ಅವರು ಏಪ್ರಿಲ್ ವೇಳೆಗೆ ಭಾರತದಲ್ಲಿ ಕಾರ್ಯಾರಂಭ ಮಾಡುವ ಯೋಜನೆ ಹೊಂದಿದ್ದಾರೆ.
CNBC-TV18 ವರದಿ ಪ್ರಕಾರ, ಟೆಸ್ಲಾ ಆರಂಭಿಕ ಹಂತದಲ್ಲಿ ಭಾರತೀಯ ಮಾರುಕಟ್ಟೆಗೆ ₹22 ಲಕ್ಷಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುವ ಸಾಧ್ಯತೆ ಇದೆ.