New Delhi: ಜೂನ್-ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ (England) ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ (Test series) ಭಾರತ ತಂಡದ ಆಟಗಾರರು ಸಿದ್ಧರಾಗುವ ನಿಟ್ಟಿನಲ್ಲಿ BCCI ಹೊಸ ತಂತ್ರ ಅನುಸರಿಸಲು ನಿರ್ಧರಿಸಿದೆ.
IPL ಟಿ20 ಫಾರ್ಮ್ಯಾಟ್ ಆಗಿರುವುದರಿಂದ ಬಿಳಿ ಚೆಂಡು ಬಳಸಲಾಗುತ್ತದೆ. ಆದರೆ, ಟೆಸ್ಟ್ ಕ್ರಿಕೆಟ್‌ಗೆ ಕೆಂಪು ಚೆಂಡು ಬಳಸುವುದು ಅನಿವಾರ್ಯ. ಈ ಕಾರಣದಿಂದಾಗಿ, ಐಪಿಎಲ್ ಸಂದರ್ಭದಲ್ಲೇ ಆಟಗಾರರಿಗೆ ಕೆಂಪು ಚೆಂಡಿನಲ್ಲಿ ಅಭ್ಯಾಸ ಮಾಡಲು ಬಿಸಿಸಿಐ ಸೂಚನೆ ನೀಡಲಿದೆ.
ಈ ತಂತ್ರದಿಂದ, ಆಟಗಾರರು ಟೆಸ್ಟ್‌ಗಾಗಿ ಸೂಕ್ತವಾದ ತಯಾರಿ ಮಾಡಿಕೊಂಡು ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ. ಐಪಿಎಲ್ ಮಾರ್ಚ್ 24ರಿಂದ ಮೇ 25ರ ವರೆಗೆ ನಡೆಯಲಿದ್ದು, ಇಂಗ್ಲೆಂಡ್ ಟೆಸ್ಟ್ ಸರಣಿ ಜೂನ್ 20ರಂದು ಆರಂಭವಾಗಲಿದೆ.