Mumbai: ಮಹಾರಾಷ್ಟ್ರ (Maharashtra) ಸರ್ಕಾರದಲ್ಲಿ ಮೊದಲ ಸಂಕಟ – ಆಹಾರ ಇಲಾಖೆ ಸಚಿವ ಧನಂಜಯ್ ಮುಂಡೆ (Dhananjay Munde) ರಾಜೀನಾಮೆ ನೀಡಿದ್ದಾರೆ.
ಬೀಡ್ ಜಿಲ್ಲೆಯಲ್ಲಿ ನಡೆದ ಸರಪಂಚ್ ಕೊಲೆ ಪ್ರಕರಣದಲ್ಲಿ ಮುಂಡೆ ಅವರ ಆಪ್ತ ವಾಲ್ಮಿಕ್ ಕರಡ್ ಪ್ರಮುಖ ಆರೋಪಿಯಾಗಿದ್ದು, ಅವರ ಬಂಧನದ ಬಳಿಕ ರಾಜಕೀಯ ಒತ್ತಡ ಹೆಚ್ಚಾಯಿತು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಂದ ರಾಜೀನಾಮೆಗೆ ಸೂಚನೆ ನೀಡಿದ ನಂತರ, ಮುಂಡೆ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.