Bengaluru: “ನಾವು ಸಿನಿಮಾ (Cinema) ಇಲ್ಲದೆ ಬದುಕಬಹುದು, ಆದರೆ ಸಿನಿಮಾಕ್ಕೆ ಸರ್ಕಾರ ಅನಿವಾರ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಹೇಳಿದ್ದಾರೆ.
ಇಂದು ವಿಧಾನಸಭೆಯ ಕಲಾಪಕ್ಕೆ ಹಾಜರಾಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಚಿತ್ರರಂಗದವರು ಟೀಕೆ ಮಾಡಲಿ ಎಂಬ ಕಾರಣಕ್ಕೆ ನಾನು ‘ನಟ್ಟು-ಬೋಲ್ಟು’ ಎಂಬ ಪದ ಬಳಸಿದ್ದೇನೆ” ಎಂದರು.
“ಚಿತ್ರರಂಗದ ಅಭಿವೃದ್ಧಿಗೆ ಸರ್ಕಾರ ಅಂತಾರಾಷ್ಟ್ರೀಯ ಚಿತ್ರೋತ್ಸವ ಆಯೋಜಿಸಿದೆ. ಆದರೆ ಅವರೇ ಭಾಗವಹಿಸದೆ ಇದ್ದರೆ ಹೇಗೆ?” ಎಂದು ಪ್ರಶ್ನಿಸಿದರು.
“ನಾನು ಸಿನಿಮಾ ಕ್ಷೇತ್ರದವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಸಹಾಯ ಪಡೆದವರಿಗೆ ಅದು ಗೊತ್ತಿದೆ. ಆಯೋಜನೆಯಲ್ಲಿ ಕೆಲವು ತಪ್ಪುಗಳಾಗಿರಬಹುದು, ಆದರೆ ನಿರ್ದೇಶಕ ನಾಗಾಭರಣ ಹೇಳಿದುದನ್ನು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.