Bengaluru: ಉಪಮುಖ್ಯಮಂತ್ರಿ DK ಶಿವಕುಮಾರ್ (Deputy Chief Minister DK Shivakumar) ಅವರು KPCC ಅಧ್ಯಕ್ಷರಾಗಿ ಜುಲೈ 2ಕ್ಕೆ ಐದು ವರ್ಷ ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೂರು ತಿಂಗಳ ಮುಂಚೆಯೇ ಔತಣಕೂಟ ಆಯೋಜಿಸಿದ್ದರು. ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ನಡೆದ ಈ ಭೋಜನಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಭಾಗವಹಿಸಿದ್ದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಮಾತುಗಳು ಗರಿಗೆದರಿದ್ದು, KPCC ಅಧ್ಯಕ್ಷರ ಬದಲಾವಣೆಯ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯ ಬಜೆಟ್ ಅಧಿವೇಶನದ ಬಳಿಕ ಪ್ರಮುಖ ರಾಜಕೀಯ ಬೆಳವಣಿಗೆಗಳಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸಚಿವರು ಕೆ. ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಡಿಕೆಶಿಯ ಸ್ಥಾನಕ್ಕೆ ಮತ್ತೊಬ್ಬರನ್ನು ತರಲು ಮುಂದಾಗಿದ್ದಾರೆ ಎಂಬ ವರದಿಯಿದೆ.