back to top
22.2 C
Bengaluru
Wednesday, October 8, 2025
HomeBusinessChip Design And Fabrication ಸಂಶೋಧನೆ ಮುಂಚೂಣಿಯಲ್ಲಿ ಭಾರತ

Chip Design And Fabrication ಸಂಶೋಧನೆ ಮುಂಚೂಣಿಯಲ್ಲಿ ಭಾರತ

- Advertisement -
- Advertisement -


ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ (Chip Design And Fabrication) ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಮಹತ್ವದ ಸಾಧನೆ ಮಾಡಿದ್ದಾರೆ. 2018 ರಿಂದ 2023ರವರೆಗಿನ ಅವಧಿಯಲ್ಲಿ ಈ ಕ್ಷೇತ್ರದಲ್ಲಿ 39,709 ಸಂಶೋಧನಾ ಪ್ರಬಂಧಗಳನ್ನು (Research Papers) ಭಾರತೀಯರು ಸಲ್ಲಿಸಿದ್ದು, ಜಾಗತಿಕವಾಗಿ ಶೇ. 8.4ರಷ್ಟು ಪಾಲು ಭಾರತದದೇ. ಚೀನಾ ಮತ್ತು ಅಮೆರಿಕ ನಂತರ ಮೂರನೇ ಸ್ಥಾನದಲ್ಲಿ ಭಾರತಿದೆ.

ಜಾಗತಿಕ ಹೋಲಿಕೆ

  • 2018-2023 ಅವಧಿಯಲ್ಲಿ
  • ಚೀನಾ – 1,60,852 ಸಂಶೋಧನಾ ಪ್ರಬಂಧ
  • ಅಮೆರಿಕಾ – ಎರಡನೇ ಸ್ಥಾನ
  • ಭಾರತ – ಮೂರನೇ ಸ್ಥಾನ

ಜಪಾನ್, ದಕ್ಷಿಣ ಕೊರಿಯಾ ಮತ್ತು ಜರ್ಮನಿಯ ಸಂಶೋಧಕರಿಗಿಂತಲೂ ಹೆಚ್ಚು ಪೇಪರ್‌ಗಳನ್ನು ಭಾರತೀಯರು ಮಂಡಿಸಿದ್ದಾರೆ, ಇದು ಗಮನಾರ್ಹ ಸಾಧನೆ.

ಭಾರತೀಯ ಸಂಶೋಧನೆಗೆ ಸರ್ಕಾರದ ಬೆಂಬಲ

  • ಕೇಂದ್ರ ಸರ್ಕಾರ ಸೆಮಿಕಂಡಕ್ಟರ್ ಸಂಶೋಧನೆಗೆ ₹2,000 ಕೋಟಿ ಹೂಡಿಕೆ ಮಾಡಿದೆ.
  • ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ.

ಸವಾಲುಗಳು ಮತ್ತು ಮುಂದಿನ ದಾರಿ

  • ಸಂಶೋಧನಾ ಪ್ರಬಂಧಗಳ ಉಲ್ಲೇಖ (citation) ಪ್ರಮಾಣ ಕಡಿಮೆ.
  • ಅಧಿಕ ಪರವಾನಿಗೆ ವೆಚ್ಚದಿಂದ ಪ್ರಭಾವಿ ಡಿಸೈನ್ ಸಾಫ್ಟ್‌ವೇರ್‌ಗಳನ್ನು ಪಡೆಯುವುದು ಕಷ್ಟ.
  • ಪ್ರಾಡಕ್ಟ್ ಲೆವೆಲ್ ಡಿಸೈನ್ ಸಾಮರ್ಥ್ಯ ಹೆಚ್ಚಿಸಬೇಕಾದ ಅಗತ್ಯ.
  • 2027-28ರ ವೇಳೆಗೆ 80 ಲಕ್ಷ ಶಿಕ್ಷಿತ ಸೆಮಿಕಂಡಕ್ಟರ್ ಉದ್ಯೋಗಿಗಳ ಕೊರತೆ ಉಂಟಾಗಬಹುದು.

ಜಾಗತಿಕವಾಗಿ ಸೆಮಿಕಂಡಕ್ಟರ್ ಉದ್ಯೋಗಿಗಳಲ್ಲಿ ಶೇ. 19ರಷ್ಟು ಮಂದಿ ಭಾರತೀಯರು. ಉತ್ತಮ ಸಮರ್ಥಶಾಲಿ ತಂತ್ರಜ್ಞಾನ ಪರಿಣಿತರು ಭಾರತದಲ್ಲಿ ಸಾಕಷ್ಟಿದ್ದರೂ, ಸಂಶೋಧನೆ ಮತ್ತು ಉದ್ಯೋಗ ಸುಧಾರಣೆಗೆ ಇನ್ನಷ್ಟು ಒತ್ತು ನೀಡಬೇಕಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page