ಭಾರತದ ಪ್ರಾಚೀನ ತಂಪು ಪಾನೀಯ ಗೋಲಿ ಸೋಡಾ (Goli Soda)ಇದೀಗ ಅಮೆರಿಕಾ, ಇಂಗ್ಲೆಂಡ್, ಯುರೋಪ್ ಹಾಗೂ ಗಲ್ಫ್ ದೇಶಗಳಲ್ಲಿ ಭಾರಿ ಬೇಡಿಕೆಯಲ್ಲಿದೆ. ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಇದು ಸಾಫ್ಟ್ ಡ್ರಿಂಕ್ ಗಳ ಪೈಕಿ ಮುಂಚೂಣಿಯಲ್ಲಿದೆ.
ವಾಣಿಜ್ಯ ಸಚಿವಾಲಯದ APEDA ಪ್ರಕಾರ, ಗೋಲಿ ಸೋಡಾ ಈಗ ವಿದೇಶದ ಗ್ರಾಹಕರ ಮೊದಲ ಆಯ್ಕೆಯಾಗುತ್ತಿದೆ. ಭಾರತೀಯ ರಫ್ತು ಕಂಪನಿ ಫೇರ್ ಎಕ್ಸ್ಪೋರ್ಟ್ಸ್ ಸಹಾಯದಿಂದ ಈ ಪಾನೀಯವನ್ನು ‘ಪಾಪ್ ಸೋಡಾ’ ಎಂದು ಮರುಬ್ರ್ಯಾಂಡ್ ಮಾಡಿ ಗಲ್ಫ್ ದೇಶಗಳ Lulu Hypermarket ನಂತಹ ದೊಡ್ಡ ಚಿಲ್ಲರೆ ಮಾರುಕಟ್ಟೆಗಳಿಗೆ ಪೂರೈಸಲಾಗುತ್ತಿದೆ.
ಒಂದು ಕಾಲದಲ್ಲಿ ಸ್ಥಳೀಯವಾಗಿ ಜನಪ್ರಿಯವಾಗಿದ್ದ ಗೋಲಿ ಸೋಡಾ, ಈಗ ಜಾಗತಿಕ ಮಟ್ಟದಲ್ಲಿ ಮರುಶೋಧನೆ ಮತ್ತು ವ್ಯಾಪಾರ ವಿಸ್ತರಣೆಯಿಂದ ಪ್ರಮುಖ ಪಾನೀಯವಾಗಿ ಬೆಳೆದಿದೆ. ಅಮೆರಿಕಾ, ಇಂಗ್ಲೆಂಡ್, ಯುರೋಪ್ ಮತ್ತು ಗಲ್ಫ್ ಮಾರುಕಟ್ಟೆಯಲ್ಲಿ ಈ ಪಾನೀಯ ಸದ್ದು ಮಾಡುತ್ತಿದೆ.
ಕೋಕಾ ಕೋಲಾ, ಪೆಪ್ಸಿ, ಮಿರಿಂಡಾ, ಸ್ಪೈಟ್ ಮುಂತಾದ ಬಹುರಾಷ್ಟ್ರೀಯ ಬ್ರ್ಯಾಂಡ್ ಗಳ ನಡುವೆ ಗೋಲಿ ಸೋಡಾ ತನ್ನದೇ ಆದ ಸ್ಥಾನ ಗಳಿಸಿದೆ. ಸ್ವದೇಶಿ ಉತ್ಪನ್ನಗಳ ಪ್ರೋತ್ಸಾಹ ಮತ್ತು ರಫ್ತು ವೃದ್ಧಿಯತ್ತ ಭಾರತದ ಪ್ರಯತ್ನದಲ್ಲಿ ಇದು ಮಹತ್ವದ ಸಾಧನೆಯಾಗಿದೆ.