ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಕೆಲಸದ ಒತ್ತಡದಲ್ಲಿ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಆದರೆ, ಆರೋಗ್ಯವೂ ಮಹತ್ವದ್ದು (Importance of Health) ಎಂದು ಬೆಂಗಳೂರಿನ ಉದ್ಯಮಿ ಅಮಿತ್ ಮಿಶ್ರಾ ತಮ್ಮ ತೀವ್ರ ಅನುಭವದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಅಮಿತ್ ಮಿಶ್ರಾ ಅವರು ಯಾವುದೇ ಪೂರ್ವಲಕ್ಷಣಗಳಿಲ್ಲದೆ ಮೂಗಿನಿಂದ ತೀವ್ರ ರಕ್ತಸ್ರಾವ ಅನುಭವಿಸಿದರು. ಆಸ್ಪತ್ರೆಗೆ ಧಾವಿಸಿದಾಗ, ಅವರ ರಕ್ತದೊತ್ತಡ 230ಕ್ಕೆ ಏರಿರುವುದು ಪತ್ತೆಯಾಯಿತು. ತಕ್ಷಣ ಅವರನ್ನು ಐಸಿಯುವಿಗೆ ದಾಖಲಿಸಲಾಯಿತು.
ಅಮಿತ್ ಮಿಶ್ರಾ ತಮ್ಮ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಆರೋಗ್ಯದ ಕುರಿತು ಕೆಲವು ಮುಖ್ಯ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.
- ನಿಯಮಿತ ತಪಾಸಣೆ ಅಗತ್ಯ: ಹೆಚ್ಚಿನ ಆರೋಗ್ಯ ಸಮಸ್ಯೆಗಳು ಪೂರ್ವಲಕ್ಷಣವಿಲ್ಲದೇ ಉಂಟಾಗಬಹುದು.
- ಕೆಲಸ ಮುಖ್ಯ, ಆದರೆ ಆರೋಗ್ಯವೂ ಮುಖ್ಯ: ಒತ್ತಡ ಹೆಚ್ಚಾದಾಗ ನಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು.
- ತುರ್ತು ಸಿದ್ಧತೆ ಬೇಕು: ಬಿಕ್ಕಟ್ಟಿನ ಸಂದರ್ಭಕ್ಕೆ ನಾವು ಸಿದ್ಧರಾಗಿರಬೇಕು.
- ವೈದ್ಯಕೀಯ ವಿಜ್ಞಾನವೆಂದರೆ ಸಂಪೂರ್ಣವಾಗಿ ನಿಗೂಢ: ಸಾಕಷ್ಟು ಪರೀಕ್ಷೆಗಳಾದರೂ ರಕ್ತದೊತ್ತಡ ಏರಿಕೆಯ ಕಾರಣ ತಿಳಿದುಬಂದಿಲ್ಲ.
- ನಿಮ್ಮ ದೇಹದ ಸೂಚನೆಗಳನ್ನು ಕೇಳಿ: ದೈಹಿಕ ಸುಸ್ತು ಅಥವಾ ಬೇಜಾರನ್ನು ನಿರ್ಲಕ್ಷಿಸಬಾರದು.
ಅಮಿತ್ ಮಿಶ್ರಾ ಅವರ ಅನುಭವವು ಕೆಲಸದ ಒತ್ತಡದ ನಡುವೆ ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಮಹತ್ವದ ಸಂದೇಶವನ್ನು ನೀಡುತ್ತದೆ. ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯದತ್ತ ಗಮನ ಹರಿಸುವುದು ಜೀವನ ರಕ್ಷಕವಾಗಿ ಪರಿಣಮಿಸಬಹುದು.







