back to top
23.3 C
Bengaluru
Tuesday, October 28, 2025
HomeKarnatakaPrivate Bus Ticket Price Hike: ಜನರಿಗೆ ಮತ್ತೊಂದು ಆರ್ಥಿಕ ಹೊರೆ

Private Bus Ticket Price Hike: ಜನರಿಗೆ ಮತ್ತೊಂದು ಆರ್ಥಿಕ ಹೊರೆ

- Advertisement -
- Advertisement -

Bengaluru: KSRTC, BMTC ಹಾಗೂ ಮೆಟ್ರೋ ಟಿಕೆಟ್ ದರ ಏರಿಕೆಯ ಬಳಿಕ, ಈಗ ಖಾಸಗಿ ಬಸ್ ಟಿಕೆಟ್ ದರವೂ (Private bus ticket price hike) ಹೆಚ್ಚಾಗಲಿದೆ ಎಂಬುದು ಸಾರ್ವಜನಿಕರಿಗೆ ಮತ್ತೊಂದು ಆಘಾತ. ಖಾಸಗಿ ಬಸ್ ಮಾಲೀಕರು ಡೀಸೆಲ್ ತೆರಿಗೆಯು ಹೆಚ್ಚಿರುವ ಕಾರಣವನ್ನು ಮುಂದಿಟ್ಟು ಟಿಕೆಟ್ ದರ ಶೀಘ್ರದಲ್ಲೇ ಶೇಕಡಾ 15ರಿಂದ 20 ರಷ್ಟುವರೆಗೆ ಹೆಚ್ಚಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡದಿದ್ದರೆ ಟಿಕೆಟ್ ದರವನ್ನು ನಾವು ಹೆಚ್ಚಿಸುವೆವು ಎಂದು ಖಾಸಗಿ ಬಸ್ ಮಾಲೀಕರು ಎಚ್ಚರಿಸಿದ್ದಾರೆ. ಈ ಕುರಿತು ಖಾಸಗಿ ಸಾರಿಗೆ ಒಕ್ಕೂಟದ ಅಧ್ಯಕ್ಷ ಟರಾಜ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ ಪಡೆಯುತ್ತಿದ್ದರೂ, ಇದರಿಂದ ಖಾಸಗಿ ಬಸ್ ಸಂಸ್ಥೆಗಳ ಆದಾಯ ಕಡಿಮೆಯಾಗಿದೆ. ಪ್ರತಿ ಬಸ್ ನಿರ್ವಹಣೆಗೆ 18-20 ಸಾವಿರ ರೂ. ವೆಚ್ಚವಾಗುತ್ತಿದ್ದು, ದರ ಏರಿಕೆ ಮಾಡದಿದ್ದರೆ ನಷ್ಟ ಅತೀತವಾಗಲಿದೆ ಎಂದು ಮಾಲೀಕರು ಹೇಳಿದ್ದಾರೆ.

ಸ್ಥಿರವಾಗಿ ಟಿಕೆಟ್ ದರ ಏರಿದರೆ ಸಾಮಾನ್ಯ ಜನತೆಗೆ ಇದು ಭಾರಿಯಾದ ಹೊರೆಯಾಗಲಿದೆ. ಹಬ್ಬದ ವೇಳೆ ಮಾತ್ರ ದರ ಏರಿಸುತ್ತಿದ್ದ ಖಾಸಗಿ ಬಸ್‌ಗಳು, ಇನ್ನು ಮುಂದೆ ನಿಯಮಿತವಾಗಿ ದರ ಹೆಚ್ಚಿಸಲು ಮುಂದಾಗಿವೆ. ಇದರಿಂದ ಬೆಂಗಳೂರು ಮತ್ತು ಇತರೆ ನಗರಗಳಿಗೆ ಪ್ರಯಾಣಿಸುವವರು ತೀವ್ರವಾಗಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ.

ಖಾಸಗಿ ಬಸ್‌ಗಳ ಈ ನಿರ್ಧಾರಕ್ಕೆ ಸರ್ಕಾರ ತಡೆಯಿಡುತ್ತದೆಯೇ ಅಥವಾ ಇಲ್ಲವೇ ಎಂಬುದು ಜನತೆ ಕಾದು ನೋಡುತ್ತಿರುವ ಪ್ರಶ್ನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page