back to top
24.7 C
Bengaluru
Friday, June 27, 2025
HomeNewsLSG vs DC ಫೈಟ್: ಕನ್ನಡಿಗನ ಮೇಲೆ ಎಲ್ಲರ ಕಣ್ಣು

LSG vs DC ಫೈಟ್: ಕನ್ನಡಿಗನ ಮೇಲೆ ಎಲ್ಲರ ಕಣ್ಣು

- Advertisement -
- Advertisement -

IPL 40ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಎದುರಿಸುತ್ತಿವೆ. ಈ ಪಂದ್ಯವು ಉತ್ತರ ಪ್ರದೇಶದ ಲಕ್ನೋದ ಏಕಾನಾ ಮೈದಾನದಲ್ಲಿ ನಡೆಯಲಿದೆ.

ಲಕ್ನೋ ಸೂಪರ್ ಜೈಂಟ್ಸ್ (LSG): ಈ ಋತುವಿನಲ್ಲಿ ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. 8 ಪಂದ್ಯಗಳಲ್ಲಿ 5 ಗೆಲುವು ಮತ್ತು 3 ಸೋಲು ಕಂಡಿದೆ. ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 2 ರನ್ ಗಳಿಂದ ಜಯ ಹೊಂದಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಡೆಲ್ಲಿ ಕ್ಯಾಪಿಟಲ್ಸ್ (DC): ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ತಂಡ ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿ ಇದೆ. 8 ಪಂದ್ಯಗಳಲ್ಲಿ 5 ಗೆಲುವು ಮತ್ತು 2 ಸೋಲು ಕಂಡಿದೆ. ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 7 ವಿಕೆಟ್ ಗಳಿಂದ ಸೋಲು ಅನುಭವಿಸಿತ್ತು. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕನ್ನಡಿಗ ಕೆ.ಎಲ್.ರಾಹುಲ್ ಅವರ ಮೇಲೆ ಎಲ್ಲರ ಕಣ್ಣು ಇದೆ.

ಇವತ್ತಿಗೆ ಈ 2 ತಂಡಗಳು 6 ಬಾರಿ ಎದುರಿಸಿವೆ. ಎರಡೂ ತಂಡಗಳು 3-3 ಬಾರಿ ಜಯಗಳಿಸಿವೆ.

ಗರಿಷ್ಠ-ಕನಿಷ್ಠ ಸ್ಕೋರ್

  • ಡೆಲ್ಲಿ ಕ್ಯಾಪಿಟಲ್ಸ್‌ (LSG ವಿರುದ್ಧ): ಗರಿಷ್ಠ 211 ರನ್, ಕನಿಷ್ಠ 143 ರನ್.
  • ಲಕ್ನೋ ಸೂಪರ್ ಜೈಂಟ್ಸ್‌ (DC ವಿರುದ್ಧ): ಗರಿಷ್ಠ 209 ರನ್, ಕನಿಷ್ಠ 167 ರನ್.

ಡೆಲ್ಲಿ ಕ್ಯಾಪಿಟಲ್ಸ್: ಅಭಿಷೇಕ್ ಪೊರೆಲ್, ಕರುಣ್ ನಾಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.

ಲಕ್ನೋ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್, ಪ್ರಿನ್ಸ್ ಯಾದವ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್.

ಪಂದ್ಯ ಪ್ರಾರಂಭ: ರಾತ್ರಿ 7.30ಕ್ಕೆ

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, JioHotstar

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page