back to top
21.3 C
Bengaluru
Tuesday, November 11, 2025
HomeHealthWorld Malaria Day 2025: ಮಲೇರಿಯಾ ತಡೆಯಲು ಪಾಲಿಸಬಹುದಾದ ಸರಳ ಸಲಹೆಗಳು

World Malaria Day 2025: ಮಲೇರಿಯಾ ತಡೆಯಲು ಪಾಲಿಸಬಹುದಾದ ಸರಳ ಸಲಹೆಗಳು

- Advertisement -
- Advertisement -

ಎಪ್ರಿಲ್ 25 ರಂದು ಆಚರಿಸಲಾಗುವ ವಿಶ್ವ ಮಲೇರಿಯಾ (Malaria Day) ದಿನವು, ಈ ಮಾರಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಇದನ್ನು ತಡೆಗಟ್ಟಲು ಮುಂದಾಗುವ ಪ್ರಯತ್ನವಾಗಿದೆ. ಈ ದಿನದ ಉದ್ದೇಶ, ಜನರಿಗೆ ಮಲೇರಿಯಾ ರೋಗದ ಅಪಾಯಗಳ ಬಗ್ಗೆ ತಿಳಿಸಿ, ರೋಗದ ಹರಡುವಿಕೆಯನ್ನು ತಡೆಯುವ ಬಗ್ಗೆ ಮಾಹಿತಿ ನೀಡುವುದಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಲೇರಿಯಾ ತಡೆಯಬಹುದಾದ ರೋಗವಾಗಿದ್ದರೂ, ಇದು ಇಂದಿಗೂ ಅನೇಕ ಜನರ ಆರೋಗ್ಯ ಮತ್ತು ಬದುಕಿಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ, ನಾವು ಈ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.

ಈ ದಿನದ ಇತಿಹಾಸ

2007ರಲ್ಲಿ ವರ್ಲ್ಡ್ ಹೆಲ್ತ್ ಅಸೆಂಬ್ಲಿಯು ಎಪ್ರಿಲ್ 25ನ್ನು “ವಿಶ್ವ ಮಲೇರಿಯಾ ದಿನ”ವೆಂದು ಘೋಷಿಸಿತು. ನಂತರ 2008ರಲ್ಲಿ ಈ ದಿನವನ್ನು ಮೊದಲಬಾರಿಗೆ ಆಚರಿಸಲಾಯಿತು. ಈ ದಿನದ ಮೂಲಕ ಪ್ರತಿ ವರ್ಷ ಮಲೇರಿಯಾವನ್ನು ನಿರ್ಮೂಲನೆ ಮಾಡುವ ಗುರಿಯನ್ನು ನೆನಪಿಸಿಕೊಂಡು ಕಾರ್ಯಕ್ರಮಗಳು ನಡೆಯುತ್ತವೆ.

ಈ ದಿನದ ಮಹತ್ವ

ವಿಶ್ವ ಮಲೇರಿಯಾ ದಿನವು ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಸಾರ್ವಜನಿಕರು ಮಲೇರಿಯಾ ವಿರುದ್ಧ ಒಟ್ಟಾಗಿ ಹೋರಾಡಲು ಒತ್ತಾಸೆಯಾಗಿ ಕಾರ್ಯನಿರ್ವಹಿಸುತ್ತವೆ. ಈ ದಿನದ ಅಂಗವಾಗಿ ಆರೋಗ್ಯ ಜಾಥೆಗಳು, ಶಿಕ್ಷಣ ಕಾರ್ಯಕ್ರಮಗಳು ಮತ್ತು ಮುನ್ನೆಚ್ಚರಿಕೆ ಚಟುವಟಿಕೆಗಳು ನಡೆಯುತ್ತವೆ.

ಮಲೇರಿಯಾ ತಡೆಯಲು ಸಲಹೆಗಳು

  • ರಾತ್ರಿ ಸಮಯದಲ್ಲಿ ಬಟ್ಟೆಗಳಲ್ಲಿ ಕೈಗಳು, ಕಾಲುಗಳು ಮುಚ್ಚಿರುವ ಬಟ್ಟೆ ಧರಿಸಿ.
  • ಮಲಗುವ ಸ್ಥಳದಲ್ಲಿ ಸೊಳ್ಳೆ ತಡೆ ಪರದೆಯನ್ನು ಬಳಸಿ.
  • ಮನೆಯ ಸುತ್ತ ನೀರು ನಿಲ್ಲದಂತೆ ಜಾಗರೂಕರಾಗಿರಿ.
  • ನೀರಿನ ಬಕೆಟ್, ಡಬ್ಬೆಗಳಿಗೆ ಮುಚ್ಚಳ ಹಾಕಿ.
  • ಬೇಸಿಗೆ ಅಥವಾ ಮಳೆಗಾಲದಲ್ಲಿ ಸಾಕಷ್ಟು ನೀರು ಕುಡಿಯಿರಿ, ಇದು ದೇಹವನ್ನು ಹೈಡ್ರೇಟೆಡ್ ಇಡುತ್ತದೆ.

ಸೂಚನೆ: ಈ ಮಾಹಿತಿಯು ಸಾಮಾನ್ಯ ಅರಿವಿಗೆ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆಗೆ ದಯವಿಟ್ಟು ವೈದ್ಯರ ಸಲಹೆ ಪಡೆಯಿರಿ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page