back to top
23.7 C
Bengaluru
Saturday, October 11, 2025
HomeIndiaInternational Dance Day 2025: ಆಚರಣೆಯ ಉದ್ದೇಶ

International Dance Day 2025: ಆಚರಣೆಯ ಉದ್ದೇಶ

- Advertisement -
- Advertisement -

ನೃತ್ಯ ಎಂದರೆ ನಂಬಿಕೆಯ ಕಲಾವಿದರಿಗೆ ಜೀವ. ತಮ್ಮ ನೃತ್ಯದಿಂದ ಹೆಸರಾಂತರಾದ ನೃತ್ಯಗಾರರನ್ನು ಗೌರವಿಸುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್ 29 ರಂದು ಅಂತಾರಾಷ್ಟ್ರೀಯ ನೃತ್ಯ ದಿನವನ್ನು (International Dance Day) ಆಚರಿಸಲಾಗುತ್ತದೆ. ಈ ದಿನವು ನೃತ್ಯ ಕಲೆಯ ಮಹತ್ವವನ್ನು ಜನರಿಗೆ ತಿಳಿಸಲು, ವಿವಿಧ ನೃತ್ಯ ಪ್ರಕಾರಗಳನ್ನು ಪರಿಚಯಿಸಲು ಮತ್ತು ನೃತ್ಯಗಾರರನ್ನು ಗೌರವಿಸಲು ನಿಮಿತ್ತವಾಗಿದೆ.

ಅಂತಾರಾಷ್ಟ್ರೀಯ ನೃತ್ಯ ದಿನದ ಇತಿಹಾಸ: 1982 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಯ (ಐಟಿಐ) ನೃತ್ಯ ಸಮಿತಿಯು ಈ ದಿನವನ್ನು ಪ್ರಾರಂಭಿಸಿತು. ಇದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (ಯುನೆಸ್ಕೋ) ಅಂಗವಾಗಿದ್ದು, ಜೀನ್ ಜಾರ್ಜಸ್ ನೊವೆರೆ ಎಂಬ ಪ್ರಸಿದ್ಧ ಬ್ಯಾಲೆ ಮಾಸ್ಟರ್ ಅವರ ಜನ್ಮದಿನವನ್ನು ಆಚರಿಸುವುದರ ಮೂಲಕ ಈ ದಿನವನ್ನು ಪ್ರತಿಷ್ಠಿತವಾಗಿ ಪ್ರಾರಂಭಿಸಿದರು.

ನೃತ್ಯದ ಮಹತ್ವ ಮತ್ತು ಆಚರಣೆಯ ಉದ್ದೇಶ: ಈ ನೃತ್ಯ ಕಲೆ ಮನೋರಂಜನೆಯನ್ನು ನೀಡುವುದು, ಭಾವನೆಯನ್ನು ವ್ಯಕ್ತಪಡಿಸುವುದು, ಸಂಸ್ಕೃತಿಯನ್ನು ಪ್ರತಿನಿಧಿಸುವುದು.  ಮಾತ್ರವಲ್ಲದೆ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ. ಈ ದಿನವು ನೃತ್ಯ ಕಲೆಯ ಮಹತ್ವವನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಲು, ನೃತ್ಯಗಾರರನ್ನು ಗೌರವಿಸಲು ಹಾಗೂ ವಿವಿಧ ನೃತ್ಯ ಪ್ರದರ್ಶನಗಳನ್ನು ಆಯೋಜಿಸಲು ಬಳಸಲಾಗುತ್ತದೆ.

ಭಾರತದಲ್ಲಿ ಶಾಸ್ತ್ರೀಯ ನೃತ್ಯಗಳ ವೈವಿಧ್ಯ: ಭಾರತದಲ್ಲಿ ನೃತ್ಯವು ಸಾಂಸ್ಕೃತಿಕ ವೈವಿಧ್ಯತೆಯ ಪ್ರತೀಕವಾಗಿದೆ. ಭರತನಾಟ್ಯ, ಕೂಚಿಪುಡಿ, ಕಥಕ್, ಒಡಿಸ್ಸಿ, ಮುಂತಾದ ನೃತ್ಯ ಪ್ರಕಾರಗಳು ಪ್ರಪಂಚದೆಲ್ಲೋ ಪ್ರಸಿದ್ಧಿ ಹೊಂದಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page