back to top
20.8 C
Bengaluru
Saturday, August 30, 2025
HomeKarnatakaಮೇ 14ರಂದು CSB ರಚನೆ ಕುರಿತ ಸಭೆ: High Court ಗೆ ರಾಜ್ಯದ ಮಾಹಿತಿ

ಮೇ 14ರಂದು CSB ರಚನೆ ಕುರಿತ ಸಭೆ: High Court ಗೆ ರಾಜ್ಯದ ಮಾಹಿತಿ

- Advertisement -
- Advertisement -

Bengaluru: IAS ಅಧಿಕಾರಿಗಳ ಕನಿಷ್ಠ ಸೇವಾವಧಿ, ವರ್ಗಾವಣೆ ಮತ್ತು ಕರ್ತವ್ಯಗಳ ನಿರ್ವಹಣೆಗೆ ಸಂಬಂಧಿಸಿದ ನಾಗರಿಕ ಸೇವಾ ಮಂಡಳಿ (CSB) ರಚನೆ ಬಗ್ಗೆ ಮೇ 14ರಂದು ಸಭೆ ನಡೆಯಲಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ (High Court) ತಿಳಿಸಿದೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ, ಕರ್ನಾಟಕದಲ್ಲಿ ಸಿಎಸ್ಬಿ ರಚನೆಯಾಗಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ಬ್ಯಾನರ್‍ಘಟ್ಟ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ರಿಷಬ್ ಟ್ರಾಕ್ರೂ ಕೋರಿ ಇದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು.

ಏಪ್ರಿಲ್ 23ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಉಪಸಮಿತಿಯ ಸಭೆ ನಡೆದಿತ್ತು. ಆದರೆ, ಕೋರಂ ಇಲ್ಲದ ಕಾರಣ ನಿರ್ಧಾರವಾಗಿಲ್ಲ. ಆದ್ದರಿಂದ ಮೇ 14ಕ್ಕೆ ಸಭೆ ಮುಂದೂಡಲಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, “ಈ ವರ್ಷ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಸಿಎಸ್ಬಿ ರಚನೆಯಾಗುವವರೆಗೆ ವರ್ಗಾವಣೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಮಂಡಳಿ ರಚನೆಯ ಬಳಿಕ ಮಾತ್ರ ಮುಂದುವರಿಸಬೇಕು” ಎಂದು ನ್ಯಾಯಾಲಯವನ್ನು ಕೇಳಿದರು.

ಅದಕ್ಕೆ ಪ್ರತಿಯಾಗಿ ನ್ಯಾಯಪೀಠ, “ಇದು ಗಗನಯಾನ ತಂತ್ರಜ್ಞಾನವಲ್ಲ. ಈ ನಿರ್ಧಾರಕ್ಕೆ ಹೆಚ್ಚು ಸಮಯ ಬೇಕಿಲ್ಲ” ಎಂದು ಸರ್ಕಾರವನ್ನು ಎಚ್ಚರಿಸಿದೆ. ಸರ್ಕಾರ ಈ ವಿಷಯದಲ್ಲಿ ಪ್ರಗತಿ ತೋರಿಲ್ಲ ಎಂದು ತಿಳಿಸಿ, ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page