Delhi: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ಕಾರಣದಿಂದಾಗಿ ಭಾರತದಲ್ಲಿ ಕಚ್ಚಾ ತೈಲದ ಬೆಲೆ (Crude oil prices rise) ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ತೈಲದ ದರ 57 ರೂ. ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ ಬೆಲೆ 5,788 ರೂ. ಆಗಿದೆ.
ಜಾಗತಿಕ ಮಟ್ಟದಲ್ಲಿ ಬೆಲೆ ಇಳಿಕೆ: ಭಾರತದಲ್ಲಿ ಬೆಲೆ ಏರಿದ್ದರೂ, ಜಾಗತಿಕವಾಗಿ ತೈಲದ ಬೆಲೆ ಇಳಿಕೆಯಾಗಿವೆ. ನ್ಯೂಯಾರ್ಕ್ ಎಕ್ಸ್ಚೇಂಜ್ನಲ್ಲಿ,
- ವೆಸ್ಟ್ ಟೆಕ್ಸಾಸ್ ಇಂಟರ್ಮಿಡಿಯೇಟ್ (WTI) ದರ 0.70% ಇಳಿಕೆ – 67.67 ಡಾಲರ್
- ಬ್ರೆಂಟ್ ತೈಲದ ದರ 0.77% ಇಳಿಕೆ – 69.23 ಡಾಲರ್
ಮಧ್ಯಪ್ರಾಚ್ಯದ ಗಲಾಟೆ ಮತ್ತು ಅಮೆರಿಕ–ಚೀನಾದ ಆರ್ಥಿಕ ಅಸ್ಥಿರತೆಯು ಜಾಗತಿಕ ತೈಲದ ದರ ಕುಸಿತಕ್ಕೆ ಕಾರಣವಾಗಿದೆ. ತಜ್ಞ ಡಾ. ಸುಧೀರ್ ಬಿಷ್ತ್ ಅವರ ಪ್ರಕಾರ, ಭಾರತವು ಬಹುಮಟ್ಟಿಗೆ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದ ಬಳಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚಾಗುತ್ತದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಾರುಕಟ್ಟೆಯಿಂದ ನಿಯಂತ್ರಿತವಾಗಿದ್ದರೂ, ಬಿಹಾರ ಚುನಾವಣೆ ಹಿನ್ನೆಲೆ HPCL, BPCL, ಇಂಡಿಯನ್ ಆಯಿಲ್ ಸಂಸ್ಥೆಗಳು ತೈಲ ಬೆಲೆ ಏರಿಸದಂತೆ ತಡೆಸಬಹುದು. ಇದರಿಂದ ಕಂಪನಿಗಳ ಲಾಭದ ಮೇಲೆ ಪರಿಣಾಮ ಬೀರುತ್ತದೆ.
ಜೂನ್ 2022ರಲ್ಲಿ ತೈಲದ ದರ 121.28 ಡಾಲರ್ ಆಗಿದ್ದರೆ, ಈಗ ಅದು 67.44 ಡಾಲರ್ ಆಗಿದೆ. ಆದರೆ ರೂಪಾಯಿ ಮೌಲ್ಯ 78 ರಿಂದ 85.66ಕ್ಕೆ ಕುಸಿದಿದೆ.
ಇರಾನ್ ತೈಲ ಉತ್ಪಾದನೆಯು ಜಾಗತಿಕ ಪೂರೈಕೆಯ 3.3% ರಷ್ಟಿದ್ದು, ಪ್ರತಿ ದಿನ 3.4 ಮಿಲಿಯನ್ ಬ್ಯಾರೆಲ್ ಉತ್ಪತ್ತಿಯಾಗುತ್ತದೆ. ಇತ್ತೀಚಿನ ದಾಳಿಯಿಂದ ಬ್ರೆಂಟ್ ತೈಲ ದರ 78 ಡಾಲರ್ ದಾಟಿದೆ. ತೈಲ ಬೆಲೆ ಏರಿಕೆಯು ಆಮದು ಮಾಡಿಕೊಳ್ಳುವ ದೇಶಗಳ ಹಣದುಬ್ಬರಿಗೆ ಕಾರಣವಾಗುತ್ತದೆ.