HomeNewsಆಗಸ್ಟ್‌ನಿಂದ Post Office ಗಳಲ್ಲಿ Digital Payment ಸೌಲಭ್ಯ

ಆಗಸ್ಟ್‌ನಿಂದ Post Office ಗಳಲ್ಲಿ Digital Payment ಸೌಲಭ್ಯ

- Advertisement -
- Advertisement -

New Delhi: ಇದೀಗ ಅಂಚೆ ಕಚೇರಿಯಲ್ಲೂ ಯುಪಿಐ ಪಾವತಿಗೆ ಅವಕಾಶ ಸಿಕ್ಕಿದೆ. ಆಗಸ್ಟ್ 2025ರಿಂದ ದೇಶದ ಎಲ್ಲ ಅಂಚೆ ಕಚೇರಿಗಳಲ್ಲಿ (post offices) ಡಿಜಿಟಲ್ ಪೇಮೆಂಟ್ (Digital payment) ಸೇವೆ ಲಭ್ಯವಾಗಲಿದೆ. ಇದು ನಿರಂತರವಾಗಿ ಅಂಚೆ ಸೇವೆ ಬಳಸುವ ಜನರಿಗೆ ಉಪಯುಕ್ತವಾಗಲಿದೆ.

ಇದಕ್ಕಾಗಿಯೇ ಅಂಚೆ ಇಲಾಖೆ ಹೊಸ ಐಟಿ ತಂತ್ರಜ್ಞಾನವನ್ನು ಅಳವಡಿಸುತ್ತಿದೆ. ಈ ತಂತ್ರಜ್ಞಾನದಲ್ಲಿ ಡೈನಮಿಕ್ ಕ್ಯುಆರ್ ಕೋಡ್ ಮೂಲಕ ಪಾವತಿ ಮಾಡಬಹುದಾಗಿದೆ. ಈ ವ್ಯವಸ್ಥೆ ಮುಂದಿನ ಆಗಸ್ಟ್‌ ವೇಳೆಗೆ ಎಲ್ಲಾ ಅಂಚೆ ಕಚೇರಿಗಳಲ್ಲಿ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.

ಈ ಹೊಸ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಮೊದಲನೇದಾಗಿ ಪ್ರಾರಂಭಿಸಲಾಗಿದೆ. ಮೈಸೂರು ಮತ್ತು ಬಾಗಲಕೋಟೆಯ ಅಂಚೆ ಕಚೇರಿಗಳಲ್ಲಿ ಕ್ಯುಆರ್ ಕೋಡ್ ಮೂಲಕ ಮೇಲ್ ಹಾಗೂ ಪಾರ್ಸಲ್ ಬುಕ್ಕಿಂಗ್ ಸೇವೆಗಳನ್ನು ಆರಂಭಿಸಲಾಗಿದೆ.

ಹಿಂದಿನ ಸ್ಟಾಟಿಕ್ ಕ್ಯುಆರ್ ಕೋಡ್ ಬಳಕೆಯಲ್ಲಿ ತಾಂತ್ರಿಕ ತೊಂದರೆಗಳು ಕಂಡುಬಂದ ಕಾರಣ, ಹೊಸ ಉಪಕರಣಗಳನ್ನು ಬಳಸುವ ಹೊಸ ವ್ಯವಸ್ಥೆಗೆ ರೂಪು ನೀಡಲಾಗಿದೆ.

ಇದೀಗ ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಪಾರ್ಸಲ್ ಸೇವೆಗಳ ಪಾವತಿಯನ್ನು ಯುಪಿಐ ಮೂಲಕ ಸುಲಭವಾಗಿ ಮಾಡಬಹುದು. ಜೊತೆಗೆ ಅಂಚೆ ಕಚೇರಿ ಚಿಲ್ಲರೆ ಉಳಿತಾಯ ಯೋಜನೆಗಳಿಗೂ ಯುಪಿಐ ಪಾವತಿಗೆ ಅವಕಾಶ ಸಿಗಲಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!