back to top
24.9 C
Bengaluru
Wednesday, July 23, 2025
HomeNewsಅಮೆರಿಕದ ಹೊಸ ಮಸೂದೆ ಅನುಮೋದನೆ: ಭಾರತೀಯರಿಗೆ ಹೆಚ್ಚುವರಿ ತೆರಿಗೆ, ವೀಸಾ ನಿಯಮಗಳು ಕಠಿಣ

ಅಮೆರಿಕದ ಹೊಸ ಮಸೂದೆ ಅನುಮೋದನೆ: ಭಾರತೀಯರಿಗೆ ಹೆಚ್ಚುವರಿ ತೆರಿಗೆ, ವೀಸಾ ನಿಯಮಗಳು ಕಠಿಣ

- Advertisement -
- Advertisement -

Washington: ಅಮೆರಿಕದ ಸಂಸತ್ತಿನ ಎರಡೂ ಸದನಗಳು ಇದೀಗ ಒನ್ ಬಿಗ್ ಬ್ಯೂಟಿಫುಲ್ ಬಿಲ್ (One Big Beautiful Bill) ಎನ್ನುವ ಮಹತ್ವದ ಮಸೂದೆಯನ್ನು ಅಂಗೀಕರಿಸಿವೆ. ಇದು ಅಮೆರಿಕದ ಹಲವಾರು ಕ್ಷೇತ್ರಗಳಲ್ಲಿ ಬದಲಾವಣೆ ತರಲಿದ್ದು, ಭಾರತೀಯರ ಮೇಲೂ ನೇರ ಪರಿಣಾಮ ಬೀರುತ್ತದೆ.

ಈ ಮಸೂದೆ ತೆರಿಗೆ, ವಲಸೆ, ವೇತನ, ಗಡಿ ಭದ್ರತೆ, ಆರೋಗ್ಯ ಸೇವೆ ಮತ್ತು ಸಾಮಾಜಿಕ ಭದ್ರತೆ ಮುಂತಾದ ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆ. ಹಲವಾರು ದಿನಗಳ ಚರ್ಚೆಯ ಬಳಿಕ, ಸೆನೆಟ್‌ನಲ್ಲಿ ಸಮಮಟ್ಟದ ಮತಗಳು (50-50) ಬಂದಾಗ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ನಿರ್ಣಯಾತ್ಮಕ ಮತದ ಮೂಲಕ ಮಸೂದೆ ಅಂಗೀಕಾರವಾಯಿತು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಮಸೂದೆಯನ್ನು ಶ್ಲಾಘಿಸಿದ್ದು, ಇದು ಅಮೆರಿಕದ ಜನತೆಗೆ ಲಾಭದಾಯಕವೆಂದು ತಿಳಿಸಿದ್ದಾರೆ. ಜುಲೈ 4ರೊಳಗೆ ಈ ಮಸೂದೆ ಸಂಪೂರ್ಣ ಜಾರಿಗೆ ಬರಲಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಭಾರತೀಯರ ಮೇಲೆ ಪರಿಣಾಮಗಳು

ಹಣ ಕಳುಹಿಸುವದಕ್ಕೆ ಹೆಚ್ಚುವರಿ ತೆರಿಗೆ: ಅಮೆರಿಕದಲ್ಲಿರುವ ಭಾರತೀಯರು ತಮ್ಮ ಕಮ್ಮಲಿಸಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ 3.5% ತೆರಿಗೆ ವಿಧಿಸಲಾಗುತ್ತದೆ. ಉದಾಹರಣೆಗೆ, ₹83,000 ಕಳುಹಿಸಿದರೆ ₹2,900 ತೆರಿಗೆ ಇರುತ್ತದೆ. ಇದು H1B, L-1, F-1 ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರಿಗೆ ಅನ್ವಯಿಸುತ್ತದೆ.

ವಲಸಿಗರ ಮೇಲೆ ಹೊಸ ನಿಯಮಗಳು: ಇನ್ನು ಮುಂದೆ ಅಮೆರಿಕಕ್ಕೆ ವಲಸೆ ಹೋಗುವ ವ್ಯಕ್ತಿ, ತನ್ನ ಹೆಂಡತಿ ಮತ್ತು ಮಕ್ಕಳನ್ನು ಮಾತ್ರ ಕರೆದುಕೊಂಡು ಹೋಗಬಹುದಾಗಿದೆ. ಇತರ ಕುಟುಂಬ ಸದಸ್ಯರಿಗೆ ಅವಕಾಶವಿಲ್ಲ.

ಗ್ರೀನ್ ಕಾರ್ಡ್ ಲಾಟರಿ ರದ್ದು: ಡೈವರ್ಸಿಟಿ ವೀಸಾ ಲಾಟರಿ ವ್ಯವಸ್ಥೆ ಕೂಡ ರದ್ದುಗೊಳಿಸಲಾಗಿದೆ. ಈ ಮೂಲಕ ಕಡಿಮೆ ಸಂಖ್ಯೆಯಲ್ಲಿ ವಲಸೆ ಬರುವ ದೇಶಗಳ ಜನರಿಗೆ ಇದುವರೆಗೆ ಸಿಕ್ಕುತ್ತಿದ್ದ ಅವಕಾಶ ಈಗ ಇಲ್ಲ.

ಬುದ್ಧಿವಂತರಿಗೆ ಮಾತ್ರ ವೀಸಾ: ಇನ್ನು ಮುಂದೆ ಅಮೆರಿಕಕ್ಕೆ ವಲಸೆ ಪಡೆಯಲು ಉತ್ತಮ ಶಿಕ್ಷಣ ಮತ್ತು ಕೌಶಲ್ಯ ಅಗತ್ಯವಿದೆ. ಸಾಮಾನ್ಯ ಅರ್ಹತೆ ಇರುವವರಿಗೆ ವೀಸಾ ಸಿಗುವುದು ಕಷ್ಟವಾಗಲಿದೆ.

ಈ ಮಸೂದೆ ಭಾರತದಿಂದ ಅಮೆರಿಕಕ್ಕೆ ಹೋಗುವ ವಲಸಿಗರಿಗೆ ಹೊಸ ಸವಾಲುಗಳನ್ನು ತಂದಿದ್ದು, ಉನ್ನತ ಅರ್ಹತೆ ಮತ್ತು ಯೋಜನೆಯೊಂದಿಗೆ ಮಾತ್ರ ವಿದೇಶಿಗರು ಮುಂದುವರಿಯಬೇಕಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page