back to top
20.5 C
Bengaluru
Friday, July 18, 2025
HomeAutoChina ವನ್ನು ಎದುರಿಸಲು ಭಾರತದಲ್ಲಿ Rare Earth Magnet ಉತ್ಪಾದನೆ ಯೋಜನೆ!

China ವನ್ನು ಎದುರಿಸಲು ಭಾರತದಲ್ಲಿ Rare Earth Magnet ಉತ್ಪಾದನೆ ಯೋಜನೆ!

- Advertisement -
- Advertisement -

ಭಾರತದಲ್ಲಿ ಇಂಧನ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಅವಶ್ಯಕವಾಗಿರುವ ರೆರ್ ಅರ್ಥ್ ಮ್ಯಾಗ್ನೆಟ್ಗಳನ್ನು (rare earth magnets) ಸ್ಥಳೀಯವಾಗಿ ತಯಾರಿಸಲು ಚಿಂತನೆ ಆರಂಭವಾಗಿದೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಭಾರತ ಸರ್ಕಾರದ ಪ್ರೋತ್ಸಾಹದೊಂದಿಗೆ ಮಹೀಂದ್ರಾ ಆಟೋಮೋಟಿವ್ ಮತ್ತು UNO ಮಿಂಡಾ ಕಂಪನಿಗಳು ಈ ಉತ್ಪಾದನೆಯಲ್ಲಿ ತೊಡಗಲು ಮುಂದಾಗಿವೆ.

ರಾಯಿಟರ್ಸ್ ವರದಿಯ ಪ್ರಕಾರ, ಈ ಪರಿಸ್ಥಿತಿಯು ಭಾರತ ಸರ್ಕಾರವನ್ನು ರೇರ್​ ಅರ್ಥ್​ ಮ್ಯಾಗ್ನೆಟಿಕ್​ಗಳ ಸಂಗ್ರಹವನ್ನು ನಿರ್ಮಿಸಲು, ಎಲೆಕ್ಟ್ರಿಕ್​ ವಾಹನಗಳು ಮತ್ತು ಎಲೆಕ್ಟ್ರಾನಿಕ್ಸ್‌ಗಳಿಗೆ ಅಗತ್ಯವಿರುವ ಘಟಕಗಳ ದೇಶೀಯ ಉತ್ಪಾದನೆಗೆ ಪ್ರೋತ್ಸಾಹವನ್ನು ನೀಡಲು ಪರಿಗಣಿಸುವಂತೆ ಪ್ರೇರೇಪಿಸಿದೆ. ಮಹೀಂದ್ರಾ ಆಟೋಮೋಟಿವ್ ಸೇರಿದಂತೆ ಕೆಲವು ಕಂಪನಿಗಳು ರೇರ್​ ಅರ್ಥ್​ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಹೂಡಿಕೆ ಮಾಡಲು ಅಥವಾ ಸ್ಥಾಪಿಸಲು ಆಸಕ್ತಿ ತೋರಿಸಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಭಾರತದ ಶಕ್ತಿ ಮತ್ತು ಸವಾಲುಗಳು

  • ಭಾರತವು ವಿಶ್ವದಲ್ಲಿ ಐದನೇ ಅತಿದೊಡ್ಡ ರೇರ್ ಅರ್ಥ್ ಖನಿಜ ಸಂಪತ್ತನ್ನು ಹೊಂದಿದೆ.
  • 2024ರಲ್ಲಿ IREL (Indian Rare Earths Limited) ಸುಮಾರು 2,900 ಟನ್ ಖನಿಜಗಳನ್ನು ಉತ್ಪಾದಿಸಿದೆ.
  • ಗಣಿಗಾರಿಕೆ ತಂತ್ರಜ್ಞಾನ ಮತ್ತು ಮೂಲಸೌಕರ್ಯದ ಕೊರತೆ ಪ್ರಮುಖ ಅಡ್ಡಿಯಾಗಿದೆ.

ಭವಿಷ್ಯ ಯೋಜನೆಗಳು

  • ದೇಶೀಯ ಉತ್ಪಾದನೆ ಹೆಚ್ಚಿಸಲು IREL ರಫ್ತು ನಿಲ್ಲಿಸಿ ಆಂತರಿಕ ಬಳಕೆಗೆ ಒತ್ತು ನೀಡುತ್ತಿದೆ.
  • ಮ್ಯಾನ್ಮಾರ್‌ ಸೇರಿದಂತೆ ಐದು ಮಧ್ಯ ಏಷ್ಯಾ ದೇಶಗಳಲ್ಲಿ ಭಾರತೀಯ ತಂಡಗಳು ಸಂಪತ್ತಿನ ಅಧ್ಯಯನ ನಡೆಸುತ್ತಿವೆ.

ಈ ಯೋಜನೆಯ ಯಶಸ್ಸಿನಿಂದ ಭಾರತವು ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯತ್ತ ಪಾದಾರ್ಪಣೆ ಮಾಡಲಿದ್ದು, ಚೀನಾ ಮೇಲಿನ ಅವಲಂಬನೆಯು ತಗ್ಗುವ ಸಾಧ್ಯತೆ ಇದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page