2025ರ ಕ್ರಿಕೆಟ್ ಅಭಿಮಾನಿಗಳಿಗೆ ಇದು ಭಾರೀ ನಿರಾಶೆಯ ವರ್ಷವಾಗಿದೆ. ಒಂದರ ನಂತರ ಮತ್ತೊಬ್ಬ ಸ್ಟಾರ್ ಆಟಗಾರ retirement ಘೋಷಿಸುತ್ತಿರುವುದು (Andre Russell Retires) ಮುಂದುವರೆದಿದೆ. ಈಗ ವೆಸ್ಟ್ ಇಂಡೀಸ್‌ನ ಸ್ಫೋಟಕ ಆಲ್ರೌಂಡರ್ ಆಂಡ್ರೆ ರಸೆಲ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಕ್ರಿಕೆಟ್ ಲೋಕಕ್ಕೆ ಒಂದು ದೊಡ್ಡ ಆಘಾತ.
ಆಂಡ್ರೆ ರಸೆಲ್ 15 ವರ್ಷಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುತ್ತಾ, ತಮ್ಮ ದಿಟ್ಟ ಬ್ಯಾಟಿಂಗ್‌ನಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದರು. ಅವರು ಎರಡು ಬಾರಿ ಟಿ20 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಈ ಸೇವೆಗೆ ಧನ್ಯವಾದ ತಿಳಿಸುತ್ತಾ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಅವರ ನಿವೃತ್ತಿ ಕುರಿತ ಪ್ರಕಟಣೆ ಹೊರಡಿಸಿದೆ.
ಇತ್ತೀಚೆಗಷ್ಟೇ 29 ವರ್ಷದ ನಿಕೋಲಸ್ ಪೂರನ್ ನಿವೃತ್ತಿ ಘೋಷಿಸಿದ್ದರಂತೆ, ಈಗ ರಸೆಲ್ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಅವರು ಜುಲೈ 21ರಿಂದ ಆಸ್ಟ್ರೇಲಿಯಾದ ವಿರುದ್ಧದ ಟಿ20 ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಡಲಿದ್ದು, ನಂತರ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ.
ರಸೆಲ್‌ರ ವೃತ್ತಿ ಸಾಧನೆಗಳು
- ಒಟ್ಟು ಪಂದ್ಯಗಳು: 702
- ಅಂತರಾಷ್ಟ್ರೀಯ ಪಂದ್ಯಗಳು: 141 (1 ಟೆಸ್ಟ್, 56 ಏಕದಿನ, 84 ಟಿ20)
- ಒಟ್ಟಾರೆ ರನ್‌ಗಳು: 11,430
- ಒಟ್ಟು ವಿಕೆಟ್‌ಗಳು: 617
- ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ: 2,114 ರನ್ ಮತ್ತು 132 ವಿಕೆಟ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಆಡಬಹುದಾದ ಸಾಮರ್ಥ್ಯ ಇದ್ದರೂ, ರಸೆಲ್‌ರ ಈ ನಿರ್ಧಾರ ಅಭಿಮಾನಿಗಳಿಗೆ ಕಟುವಾಗಿದೆ. ಅವರ ಸ್ಫೋಟಕ ಆಟವನ್ನು ಮರೆಯುವುದು ಸುಲಭವಲ್ಲ.