Delhi: ಭಾರತ ತನ್ನ ಸೇನೆಗೆ ಹೊಸ ಶಕ್ತಿಯನ್ನು ನೀಡುವತ್ತ ಹೆಜ್ಜೆ ಇಡುತ್ತಿದೆ. ಇತ್ತೀಚೆಗೆ ಭಾರತ ತನ್ನದೇ ಆದ ಅತ್ಯಾಧುನಿಕ ಯುದ್ಧವಿಮಾನವನ್ನು (ಬಾಂಬರ್) ಅಭಿವೃದ್ಧಿಪಡಿಸುವ ಯೋಜನೆಯನ್ನು ಆರಂಭಿಸಿದೆ. ಇದರ ಹೆಸರು ಅಲ್ಟ್ರಾ ಲಾಂಗ್ ರೇಂಜ್ ಸ್ಟ್ರೈಕ್ aircraft (ULRSA). ಇದು ಒಂದು ಬಾಂಬರ್ ವಿಮಾನವಾಗಿದ್ದು, (fighter jet) 12,000 ಕಿಮೀ ದೂರ ಹಾರಲು ಸಾಮರ್ಥ್ಯ ಹೊಂದಿರುತ್ತದೆ, ಅಂದರೆ ಅಮೆರಿಕವನ್ನೂ ತಲುಪಬಲ್ಲಷ್ಟು ಶಕ್ತಿಶಾಲಿಯಾಗಿದೆ.
ವಿಶ್ವದಲ್ಲೇ ಅತಿ ದೂರ ಹಾರಬಲ್ಲ ಯುದ್ಧವಿಮಾನಗಳಲ್ಲಿ ಇದೂ ಒಂದು. ಭಾರತ 2032-35 ರೊಳಗೆ ಇದರ ಮಾದರಿ (ಪ್ರೋಟೋಟೈಪ್) ಸಿದ್ಧಪಡಿಸಿ, 2036ರೊಳಗೆ ಪೂರ್ಣ ಪ್ರಮಾಣದ ನಿರ್ಮಾಣ ಆರಂಭಿಸುವ ಯೋಜನೆ ಹೊಂದಿದೆ.
ಚೀನಾದಲ್ಲಿ ಇರುವ ಎಚ್-6ಕೆ ವಿಮಾನವು ಅಂದಾಜು 8,000 ಕಿಮೀದಷ್ಟು ದೂರವರೆಗೆ ಮಾತ್ರ ಹಾರಬಲ್ಲದು. ಆದರೆ ಭಾರತ ನಿರ್ಮಿಸುತ್ತಿರುವ ವಿಮಾನವು 12,000 ಕಿಮೀ ರೇಂಜ್ ಹೊಂದಿರುತ್ತದೆ. ರಷ್ಯಾದ ಟಿಯು-160 ಮತ್ತು ಅಮೆರಿಕದ ಬಿ-21 ರೇಡರ್ ವಿಮಾನಗಳಂತಹ ವೈಶಿಷ್ಟ್ಯಗಳನ್ನು ಈ ಹೊಸ ಬಾಂಬರ್‌ವಿಮಾನವೂ ಹೊಂದಿರಲಿದೆ.
ಈ ಯುದ್ಧವಿಮಾನದ ಮುಖ್ಯ ಲಕ್ಷಣಗಳು
- 12,000 ಕಿಮೀ ಹಾರುವ ಸಾಮರ್ಥ್ಯ
- ಇಂಧನ ಮರುಪೂರಣೆ ಇಲ್ಲದೇ ದೂರ ಪ್ರಯಾಣ
- ಬ್ರಹ್ಮೋಸ್ ಕ್ಷಿಪಣಿಗಳನ್ನು ತರುವ ಸಾಮರ್ಥ್ಯ
- ಸೂಪರ್ಸಾನಿಕ್ ವೇಗ
- ಸ್ವಿಂಗ್ ವಿಂಗ್ ತಂತ್ರಜ್ಞಾನ – ಕಡಿಮೆ ಇಂಧನ ಬಳಕೆ
- ಸ್ಟೀಲ್ತ್ ತಂತ್ರಜ್ಞಾನ – ರಾಡಾರ್‌ಗೆ ತೋರುವುದಿಲ್ಲ
ಈ ಬಾಂಬರ್ ವಿಮಾನ ಅಭಿವೃದ್ಧಿಯಿಂದ ಭಾರತ ವಿಶ್ವದ ಗಗನ ಸೇನೆಯಲ್ಲೂ ಮುಂಚೂಣಿಗೆ ಬರುತ್ತದೆ.