ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಜುಲೈ 23ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದ್ದು, ಈ ಪಂದ್ಯ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್‌ಗಾಗಿ ವಿಶೇಷ (Rishabh Pant) ಮಹತ್ವ ಹೊಂದಿದೆ. ಈ ಪಂದ್ಯದಲ್ಲಿ ಪಂತ್ ಕೆಲವು ಪ್ರಮುಖ ದಾಖಲೆಗಳನ್ನು ಮುರಿಯುವ ಅವಕಾಶವನ್ನು ಹೊಂದಿದ್ದಾರೆ. 40 ರನ್‌ಗೆ ರೋಹಿತ್ ಶರ್ಮಾ ದಾಖಲೆ ಪಂತ್ ಕೈಗೆ!
ಇತಿಹಾಸದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC)
- ರೋಹಿತ್ ಶರ್ಮಾ: 2716 ರನ್ (69 ಇನ್ನಿಂಗ್ಸ್)
- ರಿಷಭ್ ಪಂತ್: 2677 ರನ್ (66 ಇನ್ನಿಂಗ್ಸ್)
ಪಂತ್ ಇನ್ನೂ ಕೇವಲ 40 ರನ್ ಗಳಿಸಿದರೆ, ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಗೌರವ ಅವರ ಹೆಸರಿಗೆ ಸೇರಲಿದೆ.
1964ರಲ್ಲಿ ಬುದ್ಧಿ ಕುಂದ್ರಾನ್ ಟೆಸ್ಟ್ ಸರಣಿಯಲ್ಲಿ 525 ರನ್ ಗಳಿಸಿದ್ದರು. ಪಂತ್ ಈಗಾಗಲೇ 425 ರನ್ ಗಳಿಸಿರುವುದರಿಂದ, ಇನ್ನೂ 101 ರನ್ ಗಳಿಸಿದರೆ, ಟೆಸ್ಟ್ ಸರಣಿಯಲ್ಲೇ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯುವ ಸಾಧ್ಯತೆ ಇದೆ.
ಪಂತ್ ಇನ್ನೂ 182 ರನ್ ಗಳಿಸಿದರೆ, ಡೆನಿಸ್ ಲಿಂಡ್ಸೆ (606 ರನ್ – 1966/67) ಅವರ ವಿಶ್ವದಾಖಲೆ ಮುರಿಯುವ ಸಾಧ್ಯತೆ ಇದೆ. ಲಿಂಡ್ಸೆ, ಆಂಡಿ ಫ್ಲವರ್ ಮತ್ತು ಬುದ್ಧಿ ಕುಂದ್ರಾನ್ ಅವರು ಟೆಸ್ಟ್ ಸರಣಿಯೊಂದರಲ್ಲಿ 500+ ರನ್ ಗಳಿಸಿದ ಕೀಪರ್‌ಗಳಾದರೆ, ಪಂತ್ ನಾಲ್ಕನೆಯವರಾಗಬಹುದು.
ಟೀಮ್ ಇಂಡಿಯಾದ ಟಾಪ್ WTC ಬ್ಯಾಟ್ಸ್ಮನ್‌ಗಳು
- ರೋಹಿತ್ ಶರ್ಮಾ – 2716 ರನ್
- ರಿಷಭ್ ಪಂತ್ – 2677 ರನ್
- ವಿರಾಟ್ ಕೊಹ್ಲಿ – 2617 ರನ್
- ಶುಭಮನ್ ಗಿಲ್ – 2500 ರನ್
- ರವೀಂದ್ರ ಜಡೇಜಾ – 2212 ರನ್
ಈಗಾಗಲೇ ಅತ್ಯುತ್ತಮ ಫಾರ್ಮ್ನಲ್ಲಿ ಬೆಳೆದಿರುವ ಪಂತ್, ಮುಂದಿನ ಪಂದ್ಯದಲ್ಲಿ ಈ ಎಲ್ಲ ಸಾಧನೆಗಳನ್ನು ತಲುಪುವ ಭರವಸೆ ಮೂಡಿಸಿದ್ದಾರೆ. ಪಂತ್ ಬ್ಯಾಟಿಂಗ್‌ಗಾಗಿ ಅಭಿಮಾನಿಗಳು ಉತ್ಸುಕತೆಯಿಂದ ಕಾಯುತ್ತಿದ್ದಾರೆ.