DELHI: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM-KISAN) ಈವರೆಗೆ 19 ಕಂತುಗಳ ಹಣವನ್ನು ರೈತರಿಗೆ ನೀಡಲಾಗಿದೆ. ಈಗ 20ನೇ ಕಂತಿನ 2,000 ರೂ. ಸಹಾಯಧನ ಜುಲೈ 18 ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.
ಬಿಹಾರದ ಮೋತಿಹರಿ ತಾಲ್ಲೂಕಿನ ಈಸ್ಟ್ ಚಂಪಾರನ್‌ನಲ್ಲಿ ಜುಲೈ 18ರಂದು ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು 20ನೇ ಕಂತಿನ ಹಣ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಝೀ ನ್ಯೂಸ್ ವರದಿ ಮಾಡಿದೆ.
ಹಿಂದಿನ ಕಂತುಗಳ ವಿವರ
- 17ನೇ ಕಂತು: ಜೂನ್ 2024
- 18ನೇ ಕಂತು: ಅಕ್ಟೋಬರ್ 2024
- 19ನೇ ಕಂತು: ಫೆಬ್ರುವರಿ 2025
- 16ನೇ ಕಂತು: ಬೆಳಗಾವಿಯ ಸಮಾವೇಶದಲ್ಲಿ ಬಿಡುಗಡೆ
ಈವರೆಗೆ ಸುಮಾರು 12 ಕೋಟಿ ರೈತರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಆದರೆ eKYC ಅಥವಾ ಅರ್ಹತೆಯ ಕೊರತೆಯಿಂದಾಗಿ ಕೆಲವರು ಮಾತ್ರ ಹಣ ಪಡೆಯುತ್ತಿದ್ದಾರೆ. 19ನೇ ಕಂತಿನ ಹಣ 9.8 ಕೋಟಿ ರೈತರು ಪಡೆದಿದ್ದರು. ಈ ಬಾರಿ 20ನೇ ಕಂತಿನ ಹಣ 10 ಕೋಟಿ ರೈತರು ಪಡೆಯುವ ನಿರೀಕ್ಷೆ ಇದೆ. ಕರ್ನಾಟಕದಿಂದ 47 ಲಕ್ಷ ರೈತರು ಯೋಜನೆಗೆ ಸೇರಿದ್ದಾರೆ.
ರೈತರಿಗೆ ವರ್ಷಕ್ಕೆ ₹6,000 ಸಹಾಯಧನವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆ 2019ರಲ್ಲಿ ಪ್ರಾರಂಭವಾಗಿದೆ ಮತ್ತು ಇದುವರೆಗೆ 19 ಕಂತುಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಹಣದ ಲಾಭ ಪಡೆಯಲು ಇಕೆವೈಸಿ (eKYC) ಅಗತ್ಯವಿದೆ.