ಕೆೇಂದ್ರ ಸರ್ಕಾರ 5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಮಾಡುವ ಹೊಸ ಯೋಜನೆ ತರಲು ಸಿದ್ಧವಾಗಿದೆ. ಇದು ಬಯೋಮೆಟ್ರಿಕ್ ಅಪ್ಡೇಟ್ ಮಾಡುವಾಗ ಮಕ್ಕಳ ಬೆರಳಚ್ಚು ಮತ್ತು ಕಣ್ಣು ಸ್ಕ್ಯಾನ್ (ಐರಿಸ್) ಸೇರ್ಪಡೆ ಮಾಡುವುದಾಗಿರುತ್ತದೆ.
5 ವರ್ಷ ದಾಟಿದ ಮಕ್ಕಳಿಗೆ ಆಧಾರ್‌ನಲ್ಲಿ ಫಿಂಗರ್ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಆಧಾರ್ ನಿಷ್ಕ್ರಿಯವಾಗಬಹುದು.
ಈ ಪ್ರಕ್ರಿಯೆ ಅಡಿಯಲ್ಲಿ ಬಯೋಮೆಟ್ರಿಕ್ ಯಂತ್ರಗಳನ್ನು ಪ್ರತಿ ಜಿಲ್ಲೆಗೆ ಕಳುಹಿಸಲಾಗುತ್ತದೆ. ಇದು ಒಂದು ಶಾಲೆಯಿಂದ ಮತ್ತೊಂದು ಶಾಲೆಗೆ ರೋಮಿಂಗ್ ರೀತಿಯಲ್ಲಿ ಹೋಗುತ್ತದೆ. ಇದರಿಂದ ಈ ಸೌಲಭ್ಯವು ಸಾಧ್ಯವಾದಷ್ಟು ಮಕ್ಕಳನ್ನು ತಲುಪಬಹುದು. ಪ್ರಸ್ತುತ ಈ ತಂತ್ರಜ್ಞಾನವನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ 45 ರಿಂದ 60 ದಿನಗಳಲ್ಲಿ ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು ಎಂದು ಯುಐಡಿಎಐ ತಿಳಿಸಿದೆ.
- ಶುಲ್ಕ: 5 ರಿಂದ 7 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಅಪ್ಡೇಟ್ ಉಚಿತ.
- 7 ವರ್ಷದ ನಂತರ, ರೂ.100 ಶುಲ್ಕ ಪಾವತಿಸಬೇಕಾಗುತ್ತದೆ.
- ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು: ಮಗು ಹೆಸರು, ಜನ್ಮ ದಿನಾಂಕ, ವಿಳಾಸದ ಪುರಾವೆ
- 5 ವರ್ಷದೊಳಗಿನ ಮಕ್ಕಳಿಗೆ ಬಯೋಮೆಟ್ರಿಕ್ ಸೆರೆಹಿಡಿಯುವುದಿಲ್ಲ, ಆದರೆ ನಂತರ ಅವಶ್ಯಕವಾಗುತ್ತದೆ.
- ಅಪ್ಡೇಟ್ ಆಗದ ಮಕ್ಕಳ ಮೊಬೈಲ್ ಸಂಖ್ಯೆಗೆ ಮೆಸೇಜ್‌ಗಳನ್ನು ಕಳುಹಿಸಲಾಗುತ್ತಿದೆ. ಮಕ್ಕಳಿಗೆ ಸರಕಾರದ ಎಲ್ಲಾ ಸೌಲಭ್ಯಗಳು ಲಭ್ಯವಾಗಬೇಕಾದರೆ ಆಧಾರ್ ಅಪ್ಡೇಟ್ ಬಹಳ ಅಗತ್ಯ.
UIDAI ಮುಂದಿನ ಹಂತದಲ್ಲಿ 15 ವರ್ಷ ದಾಟಿದ ಮಕ್ಕಳಿಗೆ ಎರಡನೇ ಬಯೋಮೆಟ್ರಿಕ್ ಅಪ್ಡೇಟ್ ಅನ್ನೂ ಶಾಲೆ ಅಥವಾ ಕಾಲೇಜುಗಳ ಮೂಲಕ ಜಾರಿಗೆ ತರಲಿದೆ.