Bengaluru: ಇಂದುಗಳಿಂದ ಬೆಂಗಳೂರಿನಲ್ಲಿ ಆಟೋ ದರ ಏರಿಕೆಯಾಗಿದ್ದು, (Bengaluru auto fare hike) ಪ್ರಯಾಣಿಕರು ಹೆಚ್ಚು ಹಣ ಕಟ್ಟಬೇಕಾದ ಪರಿಸ್ಥಿತಿ ಎದುರಾಗಲಿದೆ. ಈಗಿನಂತೆ, ಆಟೋ ಮಿನಿಮಮ್ ದರ ₹30 ರಿಂದ ₹36ಕ್ಕೆ ಏರಿಕೆಯಾಗಿದೆ. ಇದರ ಬಳಿಕ, ಪ್ರತೀ ಕಿ.ಮೀಗೆ ₹18 ರೂಪಾಯಿ ವಸೂಲಿಸಲಾಗುತ್ತದೆ. ಮೊದಲೇ ಈ ದರ ₹15 ಆಗಿತ್ತು.
ಪರಿಷ್ಕೃತ ದರ ವಿವರ
- ಮೊದಲ 2 ಕಿ.ಮೀಟರ್‌ಗೆ: ₹36
- ನಂತರ ಪ್ರತಿ ಕಿ.ಮೀಗೆ: ₹18
- ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ: ಸಾಮಾನ್ಯ ದರ + ಅದರ ಅರ್ಧ (1.5x)
- ಕಾಯುವಿಕೆ ಶುಲ್ಕ
- ಪ್ರಥಮ 5 ನಿಮಿಷ ಉಚಿತ
- ನಂತರ ಪ್ರತೀ 15 ನಿಮಿಷಕ್ಕೆ ₹10
- ಲಗೇಜ್
- 20 ಕೆ.ಜಿ ವರೆಗೆ ಉಚಿತ
- ಹೆಚ್ಚು ಆದರೆ ₹10 ಹೆಚ್ಚುವರಿ
- ಗರಿಷ್ಠ 50 ಕೆ.ಜಿಗಿಂತ ಹೆಚ್ಚು ಲಗೇಜ್‌ಗೆ ₹10
- ಮೂರು ಪ್ರಯಾಣಿಕರು ಮಾತ್ರ ಒಂದು ಆಟೋದಲ್ಲಿ ಪ್ರಯಾಣ ಮಾಡಬಹುದು.
ಚಾರ್ಜ್ ಹೆಚ್ಚಿರುವುದರಿಂದ ಚಾಲಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರು ಹೊಸ ದರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಾರ್ಚ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಆಟೋ ಸಂಘಟನೆಗಳು ದರ ಏರಿಕೆಗಾಗಿ ಬೇಡಿಕೆ ಮುಂದಿಟ್ಟಿದ್ದು, ಜಿಲ್ಲಾಧಿಕಾರಿಗಳ ಪರಿಶೀಲನೆಯ ನಂತರ ಈ ಹೊಸ ದರಗಳಿಗೆ ಅನುಮತಿ ನೀಡಲಾಗಿದೆ.