ಪ್ರತಿ ವರ್ಷ ಆಗಸ್ಟ್ 1 ರಂದು ವರ್ಲ್ಡ್ ವೈಡ್ ವೆಬ್ (World Wide Web) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಮೂಲಕ, ಇಂಟರ್ನೆಟ್‍ನ ಮೂಲಕ ಜಗತ್ತಿನಾದ್ಯಂತ ಮಾಹಿತಿ ಹಂಚಿಕೊಳ್ಳುವ ವ್ಯವಸ್ಥೆಯಾದ ವೆರ್ಲ್ಡ್ ವೈಡ್ ವೆಬ್ನ ಮಹತ್ವವನ್ನು ನೆನಪಿಸಿಕೊಳ್ಳಲಾಗುತ್ತದೆ.
ವರ್ಲ್ಡ್ ವೈಡ್ ವೆಬ್ ಅಂದರೆ ಏನು?: ಡಬ್ಲ್ಯೂಡಬ್ಲ್ಯೂಡಬ್ಲ್ಯೂ (WWW) ಎಂದರೆ ಇಂಟರ್ನೆಟ್‍ನಲ್ಲಿರುವ ಅನೇಕ ವೆಬ್ ಪುಟಗಳ (web pages) ಸಂಗ್ರಹ. ಈ ಪುಟಗಳನ್ನು ನಾವು ನಮ್ಮ ಬ್ರೌಸರ್ ಮೂಲಕ ವೀಕ್ಷಿಸುತ್ತೇವೆ. ಈ ಎಲ್ಲಾ ಪುಟಗಳು ಪರಸ್ಪರ ಲಿಂಕ್ ಆಗಿರುತ್ತವೆ. ಉದಾಹರಣೆಗೆ, ನೀವು www.google.com ಅಂತಾ ಟೈಪ್ ಮಾಡಿದರೆ ಒಂದು ಪುಟ ತೆರೆದು ಬರುತ್ತದೆ. ಇಂಥ ಎಲ್ಲಾ ಜಾಲತಾಣಗಳ ಗುಂಪಿಗೆ “ವೆಬ್” ಎನ್ನುತ್ತೇವೆ.
ಟಿಮ್ ಬರ್ನರ್ಸ್-ಲೀ ಎಂಬ ಬ್ರಿಟಿಷ್ ವಿಜ್ಞಾನಿ 1989ರಲ್ಲಿ ಸ್ವಿಟ್ಜರ್ಲೆಂಡ್‌ನ CERN ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಈ ವ್ಯವಸ್ಥೆಯನ್ನು ರಚಿಸಿದರು. ಅವರು ಪ್ರಾರಂಭದಲ್ಲಿ ಸಂಸ್ಥೆಗಳಲ್ಲಿ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಶ್ರುಷ್ಟಿಸಿದರು. ಅವರು HTTP, HTML, URL ಇತ್ಯಾದಿಗಳನ್ನು ಕೂಡಾ ಅಭಿವೃದ್ಧಿಪಡಿಸಿದರು.
ಮೊದಲ ವೆಬ್‌ಸೈಟ್ ಅನ್ನು ಕೂಡಾ ಟಿಮ್ ಬರ್ನರ್ಸ್-ಲೀ ಅವರೇ ನಿರ್ಮಿಸಿದರು. ಅವರು 1992ರಲ್ಲಿ ಮೊದಲ ಬಾರಿಗೆ ಇಂಟರ್ನೆಟ್‌ಗೆ ಒಂದು ಚಿತ್ರವನ್ನು ಅಪ್ಲೋಡ್ ಮಾಡಿದರು – ಅದು CERN ನಲ್ಲಿದ್ದವರ ಪಾಪ್ ಬ್ಯಾಂಡ್ ಫೋಟೋ.
ಇಂಟರ್ನೆಟ್ ಮತ್ತು WWW ಎರಡೂ ಒಂದೇನಾ?
- ಇಂಟರ್ನೆಟ್ ಅಂದರೆ ಕಂಪ್ಯೂಟರ್‌ಗಳ ಜಾಲ – ಒಂದು ಕಂಪ್ಯೂಟರ್ ಇನ್ನುೊಂದನ್ನು ಸಂಪರ್ಕಿಸುವ ಮೂಲ ವ್ಯವಸ್ಥೆ.
- ವೆಬ್ (WWW) ಅಂದರೆ ಆ ಜಾಲದ ಮೇಲೆ ಕಾರ್ಯನಿರ್ವಹಿಸುವ ವೆಬ್‌ಸೈಟ್‌ಗಳ ಗುಂಪು.
- ಒಂದು ಉದಾಹರಣೆಗೆ, ಇಂಟರ್ನೆಟ್ ರಸ್ತೆಯಂತಿದ್ದು, ವೆಬ್‌ಸೈಟ್‌ಗಳು ಆ ರಸ್ತೆಯಲ್ಲಿ ಚಲಿಸುವ ವಾಹನಗಳಂತಿವೆ.
ಈ ದಿನದ ಮಹತ್ವ ಏನು
- ವೆಬ್‌ನಿಂದ ನಾವು ಮಾಹಿತಿಯನ್ನು ಸುಲಭವಾಗಿ ಹುಡುಕಬಹುದು, ಹಂಚಿಕೊಳ್ಳಬಹುದು.
- ಶಾಲಾ ಕೆಲಸ, ಆನ್‌ಲೈನ್ ಖರೀದಿ, ಬ್ಯಾಂಕಿಂಗ್, ಈ ಎಲ್ಲಾ ಕಾರ್ಯಗಳಿಗೆ ವೆಬ್ ಸಹಾಯ ಮಾಡುತ್ತಿದೆ.
- WWWಕಂಡುಹಿಡಿದವರನ್ನು ಗೌರವಿಸಲು ಹಾಗೂ ಈ ಮಹತ್ವದ ಸಾಧನೆಗೆ ನಮನ ಸಲ್ಲಿಸಲು ಈ ದಿನವನ್ನು ಆಚರಿಸುತ್ತೇವೆ.
WWW ನಮಗೆ ಇಂಟರ್ನೆಟ್ ಮೂಲಕ ಜಗತ್ತನ್ನು ತಲುಪಿಸುವ ದಾರಿ. ಇದರ ಪ್ರಾರಂಭ ಟಿಮ್ ಬರ್ನರ್ಸ್-ಲೀ ಅವರಿಂದ 1989ರಲ್ಲಿ ಆಗಿದ್ದು, ಇಂದು ನಾವು ಬಳಸುತ್ತಿರುವ ಲಕ್ಷಾಂತರ ವೆಬ್‌ಸೈಟ್‌ಗಳಿಗೆ ಈತನೇ ಮೂಲ. ಇಂದಿನ ದಿನ, ಈ “ವೆಬ್”ನಿಂದ ನಾವೆಲ್ಲರೂ ಹೇಗೆ ಸಂಪರ್ಕಿತರಾಗಿದ್ದೇವೆ ಎಂಬುದನ್ನು ಸ್ಮರಿಸಲು ಒಂದು ಸುವರ್ಣ ಅವಕಾಶ!