Bengaluru: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM D.K. Shivakumar) ಅವರು ರಸ್ತೆ ಸಾರಿಗೆ ನೌಕರರಿಗೆ ಮನವಿ ಮಾಡಿದ್ದು, “ಹಠ ಹಿಡಿಯೋದು ಸರಿಯಲ್ಲ, ಕಾನೂನಿಗೆ ಗೌರವ ಕೊಡಿ” ಎಂದಿದ್ದಾರೆ. ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿದರು.
“ನಿಮ್ಮ ಬೇಡಿಕೆ ತಪ್ಪಲ್ಲ. ಆದರೆ ಸರ್ಕಾರದ ಸ್ಥಿತಿಯೂ ಗಮನದಲ್ಲಿ ಇಡಿ. ಸಿಎಂ ಹಾಗೂ ಸಾರಿಗೆ ಸಚಿವರು ಸಹಾಯ ಮಾಡೋದೇ ಇಚ್ಛೆ. ನಾಗರಿಕರಿಗೆ ತೊಂದರೆ ಆಗಬಾರದು. ಚಾಲಕರು, ಕಂಡಕ್ಟರ್‌ಗಳು ಕೆಲಸಕ್ಕೆ ಬಂದಿದ್ರು, ಅವರಿಗೆ ಅಭಿನಂದನೆಗಳು. ಜನಸೇವೆ ಮುಖ್ಯ. ಬಲವಂತದಿಂದ ಬೇಡಿಕೆ ಈಡೇರಿಸಿಕೊಳ್ಳಲು ಹೋಗಬೇಡಿ,” ಎಂದು ಹೇಳಿದರು.
ಅವರು ಮುಂದಾಗಿ ಹೇಳಿದರು – “ಆ.10ರಂದು ಪ್ರಧಾನಿ ನರೇಂದ್ರ ಮೋದಿ ಬರುವ ಸಾಧ್ಯತೆ ಇದೆ. ರೈಲ್ವೆ ಹಾಗೂ ಹಳದಿ ಮೆಟ್ರೋ ಮಾರ್ಗ ಉದ್ಘಾಟನೆಯು ಕೂಡ ಇದೇ ದಿನವಾಗಿದೆ. ನಾವು ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ.”
ಗೃಹ ಸಚಿವ ಪರಮೇಶ್ವರ್ ಹೇಳಿಕೆ: Transporte ಸಂಘದ ಮುಷ್ಕರದ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, “ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಸಣ್ಣ ಗಲಾಟೆ ಬಂದರೆ ಕ್ರಮ ಕೈಗೊಳ್ಳುತ್ತೇವೆ. ಕೆಲ ಬಸ್‌ಗಳು ಓಡಾಡುತ್ತಿವೆ. ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ,” ಎಂದರು.
ಧರ್ಮಸ್ಥಳದಲ್ಲಿ ಅಸ್ತಿಪಂಜರ ಪತ್ತೆ ಸಂಬಂಧ ಮಾತನಾಡಿದ ಗೃಹ ಸಚಿವರು, “ಸರ್ಕಾರ ಯಾವುದೇ ನಿರ್ದೇಶನ ನೀಡಲ್ಲ. SIT ಸ್ವತಂತ್ರವಾಗಿ ತನಿಖೆ ಮಾಡುತ್ತಿದೆ. ಸರ್ಕಾರ ತಾನಾಗಿ ಏನೂ ಹಸ್ತಕ್ಷೇಪ ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
“ಒಳ ಮೀಸಲಾತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆಯಾಗಲಿದೆ. ಮುಂದೇನು ನಡೆಯುತ್ತದೆ ಎನ್ನುವುದನ್ನು ನೋಡುವ,” ಎಂದರು.