New Delhi: 1xBET ಎಂಬ ಆನ್ಲೈನ್ ಬೆಟ್ಟಿಂಗ್ ಆ್ಯಪ್ (Online Betting App)ಪ್ರಚಾರ ಮಾಡಿದ ಆರೋಪದ ಮೇಲೆ, ಮಾಜಿ ಭಾರತೀಯ ಕ್ರಿಕೆಟಿಗ ಸುರೇಶ್ ರೈನಾಗೆ (Suresh Raina) ಜಾರಿ ನಿರ್ದೇಶನಾಲಯ (ED) ಆಗಸ್ಟ್ 13ರಂದು ದೆಹಲಿಯ ಕಚೇರಿಗೆ ಹಾಜರಾಗುವಂತೆ ಬುಧವಾರ ನೋಟಿಸ್ ನೀಡಿದೆ.
ಸುರೇಶ್ ರೈನಾ ಈ ಆ್ಯಪ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ, ಹಲವಾರು ಕ್ರಿಕೆಟಿಗರು ಹಾಗೂ ಬಾಲಿವುಡ್ ನಟರು ಈ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ.
ಇಡಿಗೆ ಬಂದ ದೂರಿನ ಪ್ರಕಾರ, ಇಂತಹ ಅಕ್ರಮ Online ಬೆಟ್ಟಿಂಗ್ ಆ್ಯಪ್ ಗಳು ಅನೇಕ ಜನರು ಹಾಗೂ ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ವಂಚಿಸಿದ್ದು, ತೆರಿಗೆ ತಪ್ಪಿಸುವ ಕೆಲಸವೂ ನಡೆದಿದೆ.
ರೈನಾ ಭಾರತ ಪರ 18 ಟೆಸ್ಟ್, 221 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನು ಆಡಿದ್ದು, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೂಡ ಆಡಿದ್ದಾರೆ.
ಈ ಪ್ರಕರಣದಲ್ಲಿ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್ ಸೇರಿದಂತೆ 25 ಸೆಲೆಬ್ರಿಟಿಗಳ ವಿರುದ್ಧ ಇಡಿ ತನಿಖೆ ನಡೆಸುತ್ತಿದೆ. ಕೆಲವು ಮಂದಿ ವಿಚಾರಣೆಗೆ ಹಾಜರಾಗಿ, ತಮಗೂ ಆ್ಯಪ್‌ಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.